ಇಂಡೋನೇಶ್ಯ: ಪ್ರಬಲ ಭೂಕಂಪ; 6 ಸಾವು

Update: 2021-04-10 17:00 GMT

ಜಕಾರ್ತ (ಇಂಡೋನೇಶ್ಯ), ಎ. 10: ಇಂಡೋನೇಶ್ಯದ ಜಾವಾ ದ್ವೀಪದ ಸಮುದ್ರದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ಶನಿವಾರ ತಿಳಿಸಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6 ರಷ್ಟಿತ್ತು.

‘‘ಆರು ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ ಹಾಗೂ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ’’ ಎಂದು ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ರಾದಿತ್ಯ ಜತಿ ಹೇಳಿದರು. ಪೂರ್ವ ಜಾವಾದ ಹಲವು ಗ್ರಾಮಗಳಿಂದ ಜನರನ್ನು ತೆರವುಗೊಳಿಸಲಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News