×
Ad

ಅಸಹಾಯಕ ವ್ಯಕ್ತಿಗೆ ಕೃತಕ ಕಾಲು ವಿತರಣೆ

Update: 2021-04-10 22:32 IST

ಉಡುಪಿ, ಎ.10; ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ದಾನಿಗಳ ಸಹಕಾರದಿಂದ ಕಾಲು ಕಳೆದುಕೊಂಡಿರುವ ಅಸಹಾಯಕ ವ್ಯಕ್ತಿಗೆ ಕೃತಕ ಕಾಲು ವಿತರಿಸುವ ಕಾರ್ಯಕ್ರಮ ಶನಿವಾರ ನಗರದ ಮಾರುಥಿ ವೀಥಿಕಾದಲ್ಲಿನ ನಾಗರಿಕ ಸಮಿತಿ ಕಛೇರಿಯ ಆವರಣದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್, ಸುಭಾಷ್ ನಗರದ ವೆಂಕಟೇಶ್ ದೇವಾಡಿಗ ಅವರಿಗೆ ಕೃತಕ ಕಾಲು ವಿತರಿಸಿದರು.

ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಪದಾಧಿಕಾರಿ ಗಳಾದ ಶ್ರೀಧರ್ ದೇವಾಡಿಗ ಕುಕ್ಕಿಕಟ್ಟೆ, ಕೆ.ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು. ದಾನಿಗಳಾದ ಶಾಂತಾ ಕೆ. ನಾಯಕ್, ಸುಶೀಲಾ ರಾವ್, ಬಿ.ಎಸ್.ಶೇರಿಗಾರ್, ಕೆ.ಎನ್.ದೇವಾಡಿಗ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News