ಉಳ್ಳಾಲ: ಎಸ್ ಡಿಪಿಐ ವತಿಯಿಂದ ನೀರಿನ ಪಂಪ್ ಸೆಟ್, ಪೈಪ್ ಲೈನ್ ಉದ್ಘಾಟನೆ

Update: 2021-04-11 11:32 GMT

ಉಳ್ಳಾಲ : ಅಳೇಕಲ ವಾರ್ಡ್ ನಲ್ಲಿನ ಕುಡಿಯುವ ನೀರಿಸ ಸಮಸ್ಯೆಗೆ ಸ್ಪಂದಿಸಿದ ಎಸ್ ಡಿ‌ಪಿಐ ನಗರ ಸಮಿತಿ ವತಿಯಿಂದ ದಾನಿಯಾದ ಅಲೀಮಮ್ಮ ಕೋಡಿ ಇವರು ನೀಡಿರುವ ಪಂಪ್ ಸೆಟ್ ಅನ್ನು ಎಸ್ ಡಿ ಪಿಐ ಕಾರ್ಯಕರ್ತರು ಶ್ರಮದಾನದ ಮೂಲಕ‌ ಪೈಪ್ ಲೈನ್ ಅಳವಡಿಸಿದ ಕಾಮಗಾರಿಯನ್ನು ಉದ್ಘಾಟನೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಹಳೇಕೋಟೆ ಖತೀಬ್ ಮುಹಮ್ಮದ್ ಅಲಿ ಮದನಿ ದುವಾ ಆಶಿರ್ವಚನದೊಂದಿಗೆ ಆರಂಭಿಸಲಾಯಿತು. ಪಂಪ್ ಸೆಟ್ ಉದ್ಘಾಟನೆಯನ್ನು ಎಸ್ ಡಿ‌ಪಿಐ ಉಳ್ಲಾಳ ನಗರ ಸಮಿತಿ ಅಧ್ಯಕ್ಷರಾದ ಎ ಅರ್ ಅಬ್ಬಾಸ್ ಉದ್ಘಾಟಿಸಿದರು. ನೀರಿನ‌ ಪೈಪ್ ಲೈನ್ ಅನ್ನು ಎಸ್ ಡಿ‌ಪಿಐ ಅಳೇಕಲ ಅಧ್ಯಕ್ಷರಾದ ಸಾದಿಕ್ ಯುಬಿ ಉದ್ಘಾಟಿಸಿದರು. ಇಮ್ತಿಯಾಝ್ ಅಳೇಕಲ, ಸ್ವಾಗತಿಸಿದರು. ಎಸ್ ಡಿ ಪಿ ಐ ಜಿಲ್ಲಾ  ನಾಯಕರಾದ ಝಾಕಿರ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಳೇಕಲ ವಾರ್ಡ್ ನ ನಗರಸಭಾ ಸದಸ್ಯರಾದ ಅಸ್ಗರ್ ಅಲಿ ಉಳ್ಳಾಲ ವಿಶೇಷ ಮುತುವರ್ಜಿಯಿಂದ ನಡೆದ ಈ ಕಾಮಾಗಾರಿಯಿಂದಾಗಿ ಸುತ್ತಮುತ್ತಲಿನ ಹಲವು ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮುಸ್ಲಿಂ ಒಕ್ಕೂಟ ಉಳ್ಳಾಲ ಅಧ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ,  ನಗರಸಭಾ ಸದಸ್ಯರಾದ ಅಸ್ಗರ್ ಅಲಿ, ರವೂಫ್ ಹಳೆಕೋಟೆ, ರಮೀಝ್ ಕೋಟೆಪುರ  ಎಸ್ ಡಿ‌ಪಿಐ ನಾಯಕರಾದ ಇಮ್ತಿಯಾಝ್ ಕೋಟೆಪುರ, ತನ್ವೀರ್ ಮೈಂದಾಳ, ಅಲ್ತಾಫ್  ಉಳ್ಳಾಲ ಮತ್ತು ಅಳೇಕಲ ವಾರ್ಡ್ ನ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News