×
Ad

ಚುನಾವಣಾ ಕಣದಲ್ಲಿ ಹಿಂಸಾಚಾರ ನಡೆಸುವಂತೆ ಮಮತಾ ಬ್ಯಾನರ್ಜಿ ಪ್ರಚೋದಿಸಿದ್ದಾರೆ: ಅಮಿತ್‌ ಶಾ

Update: 2021-04-11 19:09 IST

ಕೋಲ್ಕತ್ತಾ: ನಿನ್ನ ಪಶ್ಚಿಮ ಬಂಗಾಳದ ಮತಗಟ್ಟೆಯಲ್ಲಿ ಟಿಎಂಸಿ ಕಾರ್ಯಕರ್ತರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದು, ಭದ್ರತಾ ಪಡೆಗಳ ಗುಂಡಿಗೆ ನಾಲ್ಕು ಮಂದಿ ಬಲಿಯಾಗಿದ್ದರು. ಈ ಕುರಿತಾದಂತೆ ಅಮಿತ್‌ ಶಾ ರಾಜೀನಾಮೆ ನೀಡಬೇಕೆಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮಿತ್‌ ಶಾ, "ಚುನಾವಣಾ ಕಣದಲ್ಲಿ ಹಿಂಸಾಚಾರ ನಡೆಸುವಂತೆ ಮಮತಾ ಬ್ಯಾನರ್ಜಿ ಪ್ರಚೋದಿಸಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ಮಮತಾ ಬ್ಯಾನರ್ಜಿ ನೀಡಿದ ಸಲಹೆಯ ಮೇರೆಗೆ ಸಿತಾಲ್‌ ಕುಚಿಯಲ್ಲಿ ಕೇಂದ್ರ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಈಗಲೂ ಕೂಡ ಕೊಲೆಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಸಂತೀಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಮಿತ್‌ ಶಾ ಹೇಳಿದರು.

"ಪಶ್ಚಿಮ ಬಂಗಾಳದ ಜನರಿಗೆ ನನ್ನ ವಿನಮ್ರ ವಿನಂತಿಯೇನೆಂದರೆ ಉಳಿದ ಮತದಾನ ಹಂತಗಳಲ್ಲಿ ಪ್ರಜಾಪ್ರಭುತ್ವ ಹಬ್ಬವನ್ನು ಶಾಂತವಾಗಿ ಆಚರಿಸಿ. ನೀವು ಮತ ಚಲಾಯಿಸುವ ಮೂಲಕ ನಿಮ್ಮ ನೆಚ್ಚಿನ ಅಭ್ಯರ್ಥಿಯನ್ನು ಗೆಲ್ಲುವಂತೆ ಮಾಡಿ. ಬಂಗಾಳದಲ್ಲಿ ಶಾಂತಿಯುತ ಚುನಾವಣೆಯ ಹೊಸ ಇತಿಹಾಸವನ್ನು ರಚಿಸಲು ಕೆಲಸ ಮಾಡಿ" ಎಂದು ಅವರು ಹೇಳಿದರು.

"ಮೋದಿ ಜೀ ಅವರ ನಾಯಕತ್ವದಲ್ಲಿ ಮೇ 2 ರ ನಂತರ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ನಾನು ಬಂಗಾಳದ ಜನರಿಗೆ ಭರವಸೆ ನೀಡುತ್ತೇನೆ. ಈ ಚುನಾವಣಾ ಹಿಂಸೆ, ರಾಜಕೀಯ ಹಿಂಸಾಚಾರವು ಬಂಗಾಳವನ್ನು ಬಿಟ್ಟು ಶಾಶ್ವತವಾಗಿ ತೊಲಗಲಿದೆ" ಎಂದು ಅಮಿತ್‌ ಶಾ ಜನರನ್ನುದ್ದೇಶಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News