ಬದ್ರಿಯಾ ಫ್ರೆಂಡ್ಸ್ ಯುಎಇ, ಅನಿವಾಸಿ ಕನ್ನಡಿಗರ ಒಕ್ಕೂಟ, ಬ್ಲಡ್ ಡೊನರ್ಸ್ ವತಿಯಿಂದ ರಕ್ತದಾನ ಶಿಬಿರ

Update: 2021-04-11 13:55 GMT

ದುಬೈ : ಬದ್ರಿಯಾ ಫ್ರೆಂಡ್ಸ್ ಯು.ಎ.ಇ, ಅನಿವಾಸಿ ಕನ್ನಡಿಗರ ಒಕ್ಕೂಟ ಯು.ಎ.ಇ ಹಾಗೂ ಬ್ಲಡ್ ಡೊನರ್ಸ್ ಮಂಗಳೂರು ವತಿಯಿಂದ ದುಬೈಯಲ್ಲಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ಲತೀಫಾ ಆಸ್ಪತ್ರೆ ಹೂದ್ ಮೆಹ್ತಾದಲ್ಲಿ  ಶುಕ್ರವಾರ ನಡೆಯಿತು.

ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ಅನಿವಾಸಿ ಕನ್ನಡಿಗ ಹಾಗೂ ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಇದರ ಸದಸ್ಯರಾದ ಇರ್ಫಾನ್ ಎರ್ಮಾಲ್, ಬಿಡಿಎಂ ಯು.ಎ.ಇ ಘಟಕದ ಕಾರ್ಯನಿರ್ವಾಹಕರಾದ ಕೆ.ಕೆ.ಜಬ್ಬಾರ್ ಕಲ್ಲಡ್ಕ, ಅನಿವಾಸಿ ಕನ್ನಡಿಗ ಅವೀರ್ ಘಟಕದ ಅಧ್ಯಕ್ಷರಾದ ಸಿದ್ದೀಕ್ ಕಬಕ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನಿವಾಸಿ ಕನ್ನಡಿಗ  ಇದರ ಯು.ಎ.ಇ ಘಟಕದ ಅಧ್ಯಕ್ಷರಾದ ಶಂಶುದ್ದೀನ್ ಉಡುಪಿ ಹಾಗೂ ಇರ್ಷಾದ್ ಸುರತ್ಕಲ್, ಬಿಡಿಎಂ ಕಾರ್ಯನಿರ್ವಾಹರಾದ ಅರ್ಶಾದ್ ಬಾಂಬಿಲ, ಸಾದಿಕ್ ಪುತ್ತೂರು, ಬದ್ರಿಯ ಫ್ರೆಂಡ್ಸ್ ಇದರ ಸದಸ್ಯರಾದ ನವಾಝ್ ಸಜೀಪ, ಇಲ್ಯಾಸ್ ಕಂದಕ್, ಮುಶೀರ್ ಶೇಕ್, ಅನ್ವರ್ ಸಾದತ್ ಹಾಗೂ ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಹಾಗೂ ಬಿಡಿಎಂ ಮಹಿಳಾ ವಿಭಾಗದ ಸದಸ್ಯರಾದ ಮೊಹ್ಶೀನಾ ಅನ್ವರ್, ಅನಿವಾಸಿ ಕನ್ನಡಿಗ ಅವೀರ್ ವಿಭಾಗದ ಸದಸ್ಯರಾದ ಫಯಾಝ್ ಕಲ್ಲಡ್ಕ, ನಿಸಾರ್ ಆಲಡ್ಕ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರಕ್ತದಾನ ಶಿಬಿರದಲ್ಲಿ 64 ರಕ್ತದಾನಿಗಳು ಸ್ವಯಂ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ರಕ್ತದಾನ ಮಾಡಿದ ರಕ್ತದಾನಿಗಳಿಗೆ ಬಿಡಿಎಂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಹಾಗೂ ಸಂಘಟಕರಿಗೆ ಬಿಡಿಎಂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ನಝೀರ್ ಬಿಕರ್ಣಕಟ್ಟೆ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News