ಸಾಸ್ತಾನ ಚರ್ಚಿನಲ್ಲಿ ಭ್ರಾತೃತ್ವದ ರವಿವಾರ ಆಚರಣೆ

Update: 2021-04-11 14:15 GMT

ಬ್ರಹ್ಮಾವರ, ಎ.11: ಸಾಸ್ತಾನ ಸಂತ ಅಂತೋನಿಯವರ ಚರ್ಚಿನ ಶತ ಮಾನೋತ್ಸವ ಆಚರಣೆಯ ಪ್ರಯುಕ್ತ ಚರ್ಚ್ ಭ್ರಾತೃತ್ವದ ರವಿವಾರವನ್ನು ಆಚರಿಸಲಾಯಿತು.

ಭ್ರಾತ್ವತ್ವದ ರವಿವಾರ ಹಾಗೂ ಪರಮ ಪ್ರಸಾದ ಆರಾಧನೆಯ ಪವಿತ್ರ ಬಲಿ ಪೂಜೆಯ ನೇತೃತ್ವವನ್ನು ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ಹಾಗೂ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ವಂ.ವಲೇರಿಯನ್ ಮೆಂಡೊನ್ಸಾ ವಹಿಸಿದ್ದರು.

ಬಳಿಕ ಪವಿತ್ರ ಪರಮ ಪ್ರಸಾದದ ಆರಾಧನೆಯನ್ನು ನೆರವೇರಿಸಿ ಆಶೀರ್ವಚನ ನೀಡಲಾಯಿತು. ಸರಕಾರದ ಕೊವೀಡ್ ನಿಯಮಾಳಿ ಹಿನ್ನಲೆಯಲ್ಲಿ ಪರಮ ಪ್ರಸಾದವನ್ನು ಸಾರ್ವಜನಿಕವಾಗಿ ತೆರೆದ ವಾಹನದಲ್ಲಿ ಕೊಂಡೊಯ್ದು ಗೌರವಿ ಸುವ ಕಾರ್ಯಕ್ರಮವನ್ನು ರದ್ದು ಗೊಳಿಸಲಾಗಿತ್ತು. ಚರ್ಚ್ ಪಾಲನಾ ದಿನದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆ ಗಳಲ್ಲಿ ವಿಜೆೀತರಿಗೆ ಬಹುಮಾನ ವಿತರಿಸಲಾಯಿತು.

ಚರ್ಚಿನ ಪ್ರಧಾನ ಧರ್ಮಗುರು ವಂ.ಜಾನ್ ವಾಲ್ಟರ್ ಮೆಂಡೊನ್ಸಾ, ಅತಿಥಿ ಧರ್ಮಗುರುಗಳಾದ ವಂ.ಸ್ಟೀವನ್ ಡಿಸೋಜ, ವಂ.ಜೋನ್ ಲೂವಿಸ್, ಚರ್ಚಿನ ಪಾಲನಾ ಸಮಿತಿಯ ಕಾರ್ಯದರ್ಶಿ ಲೂವಿಸ್ ಡಿಸೋಜ, 18 ಆಯೋಗಗಳ ಸಂಯೋಜಕಿ ಜಾನೆಟ್ ಬಾಂಜ್ ಮತ್ತಿತ್ತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News