×
Ad

ದ.ಕ. ಜಿಲ್ಲೆ: 3,175 ಮಂದಿಗೆ ಕೊರೋನ ಲಸಿಕೆ

Update: 2021-04-11 20:49 IST

ಮಂಗಳೂರು, ಎ.11: ದ.ಕ. ಜಿಲ್ಲೆಯಲ್ಲಿ ರವಿವಾರ 60 ವರ್ಷ ಮೇಲ್ಪಟ್ಟ 1,117 ಮಂದಿ ಮೊದಲನೇ ಡೋಸ್, 90 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 13 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 7 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

7 ಮಂದಿ ಫ್ರಂಟ್‌ಲೈನ್ ವರ್ಕರ್ಸ್‌ ಮೊದಲನೇ ಡೋಸ್, 15 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45 ರಿಂದ 60 ವರ್ಷದೊಳಗಿನ 1,891 ಮಂದಿ ಮೊದಲನೇ ಡೋಸ್, 35 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ರವಿವಾರ 3,175 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ರವಿವಾರ ಬೆರಳೆಣಿಕೆಯ ಲಸಿಕಾ ಕೇಂದ್ರ ಕಾರ್ಯಾಚರಿಸಿತ್ತು.ಸೋಮವಾರ 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಲಸಿಕಾ ಉತ್ಸವ ಅಭಿಯಾನ

ಆರೋಗ್ಯ ಇಲಾಖೆ ವತಿಯಿಂದ ಎ.14ರವರೆಗೆ ಜಿಲ್ಲಾದ್ಯಂತ ಕೋವಿಡ್ ಲಸಿಕಾ ಉತ್ಸವವನ್ನು ಎಲ್ಲಾ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟ ದಲ್ಲಿ ಆಯೋಜಿಸಲಾಗಿದೆ. ಎ.15ರಂದು ಜಿಲ್ಲೆಯಲ್ಲಿ ಏಕಕಾಲದಲ್ಲಿ ವಿಶೇಷ ಲಸಿಕೆ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News