×
Ad

ಪಣಂಬೂರು ಯಾರ್ಡ್ ನಿಂದ ಮೊದಲ ಎಲೆಕ್ಟ್ರಿಕ್ ಗೂಡ್ಸ್ ರೈಲು ಪ್ರಯಾಣ

Update: 2021-04-11 21:42 IST

ಮಂಗಳೂರು, ಎ.11: ಮಂಗಳೂರು ಗುಡ್ಸ್ ಯಾರ್ಡ್‌ನಿಂದ ಸರಕು ಸಾಗಾಟದ ಗೂಡ್ಸ್  ರೈಲು ಪಣಂಬೂರ್ ಯಾರ್ಡ್‌ನ ವಿದ್ಯುದ್ದೀಕರಣದ ನಂತರ ಮೊದಲ ಎಲೆಕ್ಟ್ರಿಕ್  (ಎಸಿ ಲೊಕೊ) ಸರಕು ರೈಲು ಇಂದು ಸಂಜೆ 7.05ಕ್ಕೆ ಹೊರಟಿತು.

21 ಕವರ್ ವ್ಯಾಗನ್‌ಗಳನ್ನು ಹೊಂದಿರುವ ಸರಕು ರೈಲು, 1,820 ಟನ್ ಬೇವಿನ ಲೇಪಿತ ಯೂರಿಯಾವನ್ನು ಹೊತ್ತೊಯ್ಯುತ್ತಿದೆ. ಮಂಗಳೂರು ರಾಸಾಯನಿಕಗಳು ಮತ್ತು ರಸಗೊಬ್ಬರಗಳು (ಎಂಸಿಎಫ್) ಉತ್ಪನ್ನಗಳನ್ನು ಕೋಝಿಕೋಡ್ ಗೆ ರವಾನಿಸಲಾಗುತ್ತಿದೆ.

ಪಣಂಬೂರ್ ಗೂಡ್ಸ್ ಯಾರ್ಡ್‌ನ ವಿದ್ಯುದ್ದೀಕರಣವು ಮಾರ್ಚ್ ತಿಂಗಳಿನಲ್ಲಿ ಪೂರ್ಣಗೊಂಡಿತು.ಈ  ಯೋಜನೆಗೆ 8 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News