ಯುದ್ಧ ನೌಕೆ ಭಾರತೀಯ ಕರಾವಳಿಯಲ್ಲಿ ಸೇನಾ ಚಟುವಟಿಕೆ ನಡೆಸಿಲ್ಲ

Update: 2021-04-11 17:53 GMT

ವಾಶಿಂಗ್ಟನ್, ಎ. 11: ಅರಬ್ಬಿ ಸಮುದ್ರದಲ್ಲಿರುವ ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಅಮೆರಿಕದ ಯುದ್ಧ ನೌಕೆಯೊಂದು ಹಾದು ಹೋಗಿರುವ ವಿಷಯಕ್ಕೆ ಸಂಬಂಧಿಸಿ ಉದ್ಭವಿಸಿರುವ ವಿವಾದವನ್ನು ತಣಿಸಲು ಅಮೆರಿಕ ಮುಂದಾಗಿದೆ.

ಅವೆುರಿಕದ ನೌಕಾ ಪಡೆಗೆ ಸೇರಿದ ಡಿಸ್ಟ್ರಾಯರ್ ‘ಯುಎಸ್‌ಎಸ್ ಜಾನ್ ಪೌಲ್ ಜೋನ್ಸ್’ ಎಪ್ರಿಲ್ 7ರಂದು ಭಾರತದ ಅನುಮತಿ ಪಡೆಯದೆ ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಹಾದು ಹೋಗಿತ್ತು.

ಯುದ್ಧ ನೌಕೆಯು ಮಾಲ್ದೀವ್ಸ್ ಕರಾವಳಿಯಲ್ಲಿ ‘ಮೌನವಾಗಿ’ ಹಾದು ಹೋಗಿದೆ ಹಾಗೂ ಅದು ಯಾವುದೇ ರೀತಿಯ ಸೇನಾ ಚಟುವಟಿಕೆಗಳನ್ನು ನಡೆಸಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಜಾನ್ ಎಫ್. ಕರ್ಬಿ ಹೇಳಿದ್ದಾರೆ.

ಇದಕ್ಕೂ ಮೊದಲು ಅವೆುರಿಕದ ಯುದ್ಧನೌಕೆಯು ಭಾರತೀಯ ಜಲಪ್ರದೇಶದಲ್ಲಿ ಅನುಮತಿಯಿಲ್ಲದೆ ಹಾದು ಹೋಗಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News