×
Ad

ಗುಜರಾತ್ "ಆರೋಗ್ಯ ತುರ್ತುಪರಿಸ್ಥಿತಿಯತ್ತ'': ಸ್ವಯಂಪ್ರೇರಣೆಯಿಂದ ಹೈಕೋರ್ಟ್ ಪಿಐಎಲ್, ಇಂದು ವಿಚಾರಣೆ

Update: 2021-04-12 12:10 IST
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್: ಗುಜರಾತ್ ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳು ಹಾಗೂ ಸಾವುಗಳ ನಡುವೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಟೆಸ್ಟಿಂಗ್ ಸೌಲಭ್ಯಗಳ ಹಾಗೂ  ಔಷಧಿಗಳ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಹೈಕೋರ್ಟ್ ರವಿವಾರ ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಸಾರ್ವಜಿನಿಕ ಹಿತಾಸಕ್ತಿ ದಾವೆಯನ್ನು ಇಂದು ತುರ್ತಾಗಿ ವಿಚಾರಣೆ ನಡೆಸಲು ನಿರ್ಧರಿಸಿದೆ.

ರಾಜ್ಯವು ಒಂದು ವಿಧದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಯತ್ತ ಸಾಗುತ್ತಿದೆ ಹಾಗೂ ನಿಯಂತ್ರಣ ಮೀರಿ  ಪ್ರಕರಣಗಳು ಏರಿಕೆಯಾಗಿವೆ ಮತ್ತು ಕೋವಿಡ್ ನಿರ್ವಹಣೆ ಸಮಾಧಾನಕರವಾಗಿಲ್ಲ ಎಂದು ನ್ಯಾಯಾಲಯವು ದಿನಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳ ವರದಿಗಳನ್ನು ಉಲ್ಲೇಖಿಸಿ ರವಿವಾರ ಹೇಳಿದೆ.

ಇಂದು ಈ ಪಿಐಎಲ್ ವಿಚಾರಣೆಯು ಹಿರಿಯ ಸರಕಾರಿ ವಕೀಲರುಗಳು, ಅಡ್ವಕೇಟ್ ಜನರಲ್ ಕಮಲ್ ತ್ರಿವೇದಿ ಹಾಗೂ ಸರಕಾರಿ ಅಭಿಯೋಜಕ ಮನಿಶಾ ಶಾ ಉಪಸ್ಥಿತಿಯಲ್ಲಿ ನಡೆಯಲಿದೆ.

ರಾಜ್ಯದಲ್ಲಿ ರವಿವಾರ 5,469 ಕೋವಿಡ್ ಪ್ರಕರಣಗಳು ಹಾಗೂ  54 ಸಾವುಗಳು ವರದಿಯಾದ ದಿನದಲ್ಲಿ ನ್ಯಾಯಾಲಯದ ಈ ಮಹತ್ವದ ನಿರ್ಧಾರ ಬಂದಿದೆ.

ಎಪ್ರಿಲ್ 6ರಂದು ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ನೇತೃತ್ವದ ವಿಭಾಗೀಯ ಪೀಠವು ಸರಕಾರಿ ವಕೀಲರಿಗೆ ಸಮನ್ಸ್ ಕಳುಹಿಸಿ ಕೆಲ ದಿನಗಳ ಲಾಕ್ ಡೌನ್ ಪ್ರಕರಣಗಳ ನಿಯಂತ್ರಣಕ್ಕೆ ಸಹಕಾರಿಯಾಗಬಹುದು ಎಂದು ಸಲಹೆ ನೀಡಿತಲ್ಲದೆ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವ ಕಾರ್ಯಕ್ರಮಗಳಿಗೆ ತಡೆ ಹೇರಬೇಕೆಂದೂ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News