ದಿ. ಗಿರಿಜಾ ಎಕ್ಕೂರು ಸ್ಮರಣಾರ್ಥ ನೇತ್ರದಾನ ಸಂಕಲ್ಪ ಶಿಬಿರ
ಮಂಗಳೂರು : ದಿ. ಗಿರಿಜಾ ಎಕ್ಕೂರು ಸ್ಮರಣಾರ್ಥ ನೇತ್ರದಾನ ಸಂಕಲ್ಪ ಶಿಬಿರವು ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ರವಿವಾರ ನಡೆಯಿತು.
ರೇಡಿಯೋ ಸಾರಂಗ್ 107.8 ಎಫ್ಎಂ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟದ ಸಹಯೋಗಯಲ್ಲಿ ಕಾರ್ಯಕ್ರಮ ನಡೆಯಿತು. 72 ಮಂದಿ ನೇತ್ರದಾನ ಘೋಷಣೆ ಮಾಡಿದರು. ಅದರಲ್ಲಿ 15 ಹಿರಿಯ ನಾಗರಿಕರು, 40 ಹರೆಯ ಮೇಲ್ಪಟ್ಟ 27 ಮಂದಿ, 30 ಯುವಕರು ಸೇರಿದ್ದಾರೆ.
ದಿ. ಗಿರಿಜಾ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ನೇತ್ರದಾನದ ಸಂಕಲ್ಪ ಮಾಡಿದರು. ಪ್ರಸಾದ್ ನೇತ್ರಾಲಯದ ಡಾ. ದಿಶಾ ನೇತ್ರದಾನದ ಬಗೆಗಿನ ಮಾಹಿತಿ ನೀಡಿದರು. ರೇಡಿಯೋ ಸಾರಂಗ್ ನ ನಿರ್ದೇಶಕರಾದ ಡಾ. ಫಾ. ಮೆಲ್ವಿನ್ ಪಿಂಟೋ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಶಶಿಧರ ಶೆಟ್ಟಿ ಉಪ್ಥಿತರಿದ್ದರು. ಆರ್. ಜೆ ಅಭಿಷೇಕ್ ಅವರು ಕಾರ್ಯಕ್ರಮ ನಿರೂಪಿಸಿದರು.
ಜಯಪ್ರಕಾಶ್ ಎಕ್ಕೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೇತ್ರದಾನಕ್ಕೆ ಸ್ಪೂರ್ತಿ ನೀಡುವಂತಹ ಕಿರು ನಾಟಕ ರಚಿಸಿ ಅಭಿನಯಿಸಿದ,"ದ ವೈಷ್ಣವಿ ಕಲಾವಿದೆರ್ ಕೊಯಿಲ"ಈ ತಂಡದ ಸದಸ್ಯರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಈ ಕಲಾವಿದರೆಲ್ಲ ಅಭಿನಯಿಸು ವುದಕ್ಕೆ ಮೊದಲೇ ನೇತ್ರದಾನದ ಸಂಕಲ್ಪ ಮಾಡಿದವರು, ಅವರಲ್ಲೊಬ್ಬರು ಅಂಧರು ಆಗಿದ್ದಾರೆ.