ಕಲ್ಲಾಪು: ಸ್ಮಾರ್ಟ್ ಬೇಬಿ ಸಮೂಹದ ಮೂರನೆ ಮಳಿಗೆ ಶುಭಾರಂಭ
ಮಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಎರಡು ಮಳಿಗೆಗಳನ್ನು ಹೊಂದಿರುವ ಸ್ಮಾರ್ಟ್ ಬೇಬಿ ಸಮೂಹ ಸಂಸ್ಥೆಗಳ ಮೂರನೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಳಿಗೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಕಯ್ನ್ ಝಾ ಕಟ್ಟಡದ ಪ್ರಥಮ ಮಹಡಿಯಲ್ಲಿಂದು ಉದ್ಘಾಟನೆ ಗೊಂಡಿದೆ.
ಸ್ಮಾರ್ಟ್ ಬೇಬಿ ಸಮೂಹ ಸಂಸ್ಥೆ ಗಳ ನಿರ್ದೇಶಕರಾದ ಯೂಸುಫ್ ಬ್ಯಾರಿ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಸೋಮವಾರ ಉದ್ಘಾಟಿಸಿದರು. ಸುಮಾರು 2,600 ಚದರ ಅಡಿ ವಿಸ್ತೀರ್ಣದ ಸ್ಮಾರ್ಟ್ ಬೇಬಿ ಮಳಿಗೆ 0-8 ವರ್ಷದೊಳಗಿನ ಮಕ್ಕಳಿಗೆ ಬೇಕಾಗುವ ಉಡುಪು, ಆಟಿಕೆಗಳು, ಗುಣಮಟ್ಟದ ಸೌಂದರ್ಯ ವರ್ಧಕ ವಸ್ತುಗಳು, ಸುರಕ್ಷತಾ ಸಾಮಾಗ್ರಿಗಳು ಸೇರಿದಂತೆ ಎಲ್ಲಾ ಅವಶ್ಯ ಸಾಮಾಗ್ರಿಗಳ ಬೃಹತ್ ಸಂಗ್ರಹಗಳನ್ನು ಒಳಗೊಂಡಿದೆ. ಸ್ಮಾರ್ಟ್ ಬೇಬಿ ಸಮೂಹ ಸಂಸ್ಥೆಯ ನಿರ್ದೇಶಕ ಯೂಸುಫ್ ಬ್ಯಾರಿ ಮಳಿಗೆಯ ಕುರಿತು ಮಾತನಾಡುತ್ತಾ, ಸ್ಮಾರ್ಟ್ ಬೇಬಿ ಸಮೂಹದ ಎರಡು ಮಳಿಗೆಗಳು ಈಗಾಗಲೇ ಬೆಂಗಳೂರಿನಲ್ಲಿ ಉತ್ತಮವಾಗಿ ಕಾರ್ಯಾ ನಿರ್ವಹಿಸುತ್ತಿವೆ. ಒಂದು ಬೆಂಗಳೂರಿನ ಎಇಸಿಎಸ್ ಲೇ ಔಟ್ ಹಾಗೂ ಇನ್ನೊಂದು ಕಾಡುಗೋಡಿನಲ್ಲಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪ್ರೋತ್ಸಾಹ ದೊರೆತಿದೆ. ಇದೀಗ ಮಂಗಳೂರಿನಲ್ಲಿ ನಮ್ಮ ಸಮೂಹ ಸಂಸ್ಥೆಯ ಮೂರನೆಯ ಪ್ರದರ್ಶನ ಮತ್ತು ಮಾರಾಟ ಮಳಿಗೆ ಕಲ್ಲಾಪುವಿನಲ್ಲಿ ಆರಂಭಗೊಂಡು ಇಂದಿನಿಂದ ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 10.30ರವರೆಗೆ ತೆರೆದಿರುತ್ತದೆ.0-8 ವರ್ಷದೊಳಗಿನ ಮಕ್ಕಳಿಗೆ ಬೇಕಾಗುವ ಎಲ್ಲಾ ಅವಶ್ಯಕ ಸಾಮಾಗ್ರಿಗಳು, ಆಟಿಕೆಗಳು ಉಡುಪು ಸೇರಿದಂತೆ ಇತರ ಸಾಮಾಗ್ರಿಗಳು ಗ್ರಾಹಕರಿಗೆ ಒಂದೇ ಸೂರಿನಡಿ ಸ್ಮಾರ್ಟ್ ಬೇಬಿ ವಿಸ್ತಾರವಾದ ಮಳಿಗೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ " ಎಂದು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಅಬೂಬಕರ್ ಸಿದ್ದೀಕ್, ಫೈಝಲ್, ಫಹಾದ್ ನವಾಝ್, ಅಬ್ಬಾಸ್, ಫಯಾಝ್, ರಿಯಾಝ್ ಫರಂಗಿಪೇಟೆ ಸೇರಿದಂತೆ ಉದ್ಯಮಿಗಳು, ಗಣ್ಯರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.