ಕುರ್ ಆನ್ ನ ಕೆಲವು ಸೂಕ್ತಗಳನ್ನು ತೆರವುಗೊಳಿಸುವ ಅರ್ಜಿ ತಳ್ಳಿಹಾಕಿದ ಸುಪ್ರೀಂ ಕೋರ್ಟ್

Update: 2021-04-12 08:25 GMT

ಹೊಸದಿಲ್ಲಿ: ಭಯೋತ್ಪಾದನೆಯನ್ನು ಪ್ರಚೋದಿಸುತ್ತದೆ ಎಂದು ಮುಸ್ಲಿಮರ ಪವಿತ್ರ ಗ್ರಂಥ ಕುರ್ ಆನ್ ನ 26  ಸೂಕ್ತಗಳನ್ನು ರದ್ದುಗೊಳಿಸುವಂತೆ ಕೋರಿ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಝ್ವಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದ್ದು, ಅರ್ಜಿದಾರನಿಗೆ 50,000 ರೂ. ದಂಡ ವಿಧಿಸಿದೆ ಎಂದು barandbench.com ವರದಿ ಮಾಡಿದೆ.

ಅರ್ಜಿ ಸಲ್ಲಿಸಿದ ರಿಝ್ವಿಗೆ 50 ಸಾವಿರ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ.

ಜಸ್ಟಿಸ್ ಗಳಾದ ರೋಹಿಂಗ್ಟನ್ ಫಾಲಿ ನಾರಿಮನ್, ಬಿಆರ್ ಗವಾಯಿ ಹಾಗೂ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. 

ನ್ಯಾಯಾಲಯಗಳು ಧರ್ಮ, ವಿಜ್ಞಾನ, ತತ್ವಶಾಸ್ತ್ರಗಳ  ಬಗ್ಗೆ ವಿಚಾರ ಹಾಗೂ ನ್ಯಾಯ ನಿರ್ಣಯಗೊಳಿಸಲು ಇರುವುದಲ್ಲ ಎಂದು ಕಲ್ಕತಾ ಹೈಕೋರ್ಟ್ ಚಂದ್ರಮಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ತೀರ್ಪಿನ ವೇಳೆ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News