×
Ad

ಬಂಗಾಳದ ಜನತೆ ನಂದಿಗ್ರಾಮದಲ್ಲಿ ಮಮತಾರನ್ನು ‘ಕ್ಲೀನ್ ಬೌಲ್ಡ್’ ಮಾಡಿದ್ದಾರೆ: ಪ್ರಧಾನಿ ಮೋದಿ

Update: 2021-04-12 15:06 IST

ಹೊಸದಿಲ್ಲಿ: ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಯವರನ್ನು 'ಕ್ಲೀನ್ ಬೌಲ್ಡ್' ಮಾಡಲಾಗಿದೆ. ಅವರ ಇಡೀ ತಂಡವನ್ನು ಮೈದಾನದಿಂದ ಹೊರಹೋಗುವಂತೆ ಕೇಳಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಂಗಾಳದಲ್ಲಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ.

ಬಂಗಾಳದ ಜನತೆಯು ಮೊದಲ ನಾಲ್ಕು ಸುತ್ತಿನ ಮತದಾನದಲ್ಲಿ ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್ ಗಳನ್ನು ಸಿಡಿಸಿದ್ದು, ಬಿಜೆಪಿ ಈಗಾಗಲೇ ಶತಕ(ಸೀಟುಗಳು) ಪೂರೈಸಿದೆ. ಬಂಗಾಳದ ಜನತೆಯು ದೀದಿಯನ್ನು ನಂದಿಗ್ರಾಮದಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಅವರ ಇಡೀ ತಂಡವನ್ನು ಮೈದಾನವನ್ನು ಖಾಲಿ ಮಾಡಲು ತಿಳಿಸಲಾಗಿದೆ ಎಂದು ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ಧಿಸಿರುವ ಮಮತಾ ಅವರನ್ನು ಪ್ರಧಾನಿ ಕೆಣಕಿಸಿದರು.

ತೃಣಮೂಲ ಕಾಂಗ್ರೆಸ್‍ನ ತೀವ್ರ ಖಂಡನೆಗೆ ಕಾರಣವಾಗಿರುವ ತನ್ನ “ದೀದಿ ಓ ದೀದಿ’’ಎಂಬ ಪದವನ್ನು ಮತ್ತೊಂದು ಬಾರಿ ಬಳಸಿದ ಪ್ರಧಾನಿ, ಈಗ ಅಸೋಲ್ ಜನತೆ ನಿಜವಾದ ಬದಲಾವಣೆ ಬಯಸಿದ್ದಾರೆ. ದೀದಿ ನಿಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ನನ್ನನ್ನು ನಿಮಗೆ ಇಷ್ಟ ಬಂದಷ್ಟು ನಿಂದಿಸಿ. ಆದರೆ ಬಂಗಾಳದ ಘನತೆ ಹಾಗೂ ಸಂಪ್ರದಾಯಕ್ಕೆ ಅವಮಾನಿಸಬೇಡಿ. ಬಂಗಾಳವು ನಿಮ್ಮ ಗರ್ವ, ವಸೂಲಿತನ ಹಾಗೂ ಭ್ರಷ್ಟಾಚಾರವನ್ನು ಸಹಿಸಲಾರರು ಎಂದರು.

ದೇಶಾದ್ಯಂತ ಕೋವಿಡ್-19 ಆರ್ಭಟ ಜೋರಾಗಿರುವ ನಡುವೆ ಪ್ರಧಾನಿ ಅವರು ಬಂಗಾಳದಲ್ಲಿ ಇಂದು ಮೂರು ಕಡೆ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಭಾಗವಹಿಸಿದ್ದ ರ್ಯಾಲಿಗಳಲ್ಲಿ ಜನರು ಮಾಸ್ಕ್ ಇಲ್ಲದೆ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News