"ಬೇರೆ ಎಲ್ಲೂ ನಿರ್ಬಂಧ ಇಲ್ಲದಿರುವಾಗ ನಿಝಾಮುದ್ದೀನ್ ಗೆ ಪ್ರವೇಶಿಸುವ ಜನರ ಸಂಖ್ಯೆಗೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ"

Update: 2021-04-12 13:29 GMT

ಹೊಸದಿಲ್ಲಿ: ಬೇರೆ ಯಾವುದೇ ಧಾರ್ಮಿಕ ಸ್ಥಳಗಳಿಗೆ ಭಕ್ತರ ಸಂಖ್ಯೆಗೆ ನಿರ್ಬಂಧವಿಲ್ಲದಿರುವಾಗ ನಿಝಾಮುದ್ದೀನ್ ಮರ್ಕಝ್ ಗೆ ಪ್ರವೇಶಿಸುವ ಜನರ ಸಂಖ್ಯೆಗೆ ಮಿತಿ ಇರುವುದಿಲ್ಲ ಎಂದಿರುವ ದಿಲ್ಲಿ ಹೈಕೋರ್ಟ್, ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ರಮಝಾನ್ ಸಮಯದಲ್ಲಿ ಮಸೀದಿಯನ್ನು ಪ್ರಾರ್ಥನೆಗಾಗಿ ತೆರೆಯಲು ಅವಕಾಶ ಮಾಡಿಕೊಟ್ಟಿತು ಎಂದು indianexpress.com ವರದಿ ಮಾಡಿದೆ.

ಪೊಲೀಸರು ಪಟ್ಟಿ ಮಾಡಿರುವ 200 ಜನರ ಪೈಕಿ ಏಕಕಾಲದಲ್ಲಿ ಕೇವಲ 20 ಜನರಿಗೆ ಮಾತ್ರ ಆವರಣದೊಳಗೆ ಪ್ರವೇಶಿಸಲು ಬಿಡಬಹುದು ಎಂಬ ಕೇಂದ್ರ ಮತ್ತು ದಿಲ್ಲಿ ಪೊಲೀಸರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

"ಇದು ಮುಕ್ತ ಸ್ಥಳ. ಬೇರೆ ಯಾವುದೇ ಧಾರ್ಮಿಕ ಸ್ಥಳಗಳಿಗೆ ಇಲ್ಲದ ಭಕ್ತರ ಸಂಖ್ಯೆಯ ಮಿತಿ ಇಲ್ಲಿ ಹೊಂದಿರಬೇಕಾಗಿಲ್ಲ'' ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅಭಿಪ್ರಾಯಪಟ್ಟರು. ಯಾರೂ ಕೂಡ ದೇವಸ್ಥಾನ ಅಥವಾ ಮಸೀದಿ ಅಥವಾ ಚರ್ಚ್‌ಗೆ ಹೋಗಲು ಬಯಸಬಹುದು. 200 ಜನರ ಪಟ್ಟಿ ಸ್ವೀಕಾರಾರ್ಹವಲ್ಲ; ಅದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ಮಸೀದಿಯನ್ನು ನಿರ್ವಹಿಸುವ ವ್ಯಕ್ತಿಗಳ ಪಟ್ಟಿಯನ್ನು ಸ್ಥಳೀಯ ಎಸ್‌ಎಚ್‌ಒಗೆ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News