×
Ad

ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ಪ್ರಚಾರಕ್ಕೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

Update: 2021-04-12 19:53 IST

ಕೋಲ್ಕತಾ: ಚುನಾವಣಾ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧಿಸಿದೆ.

ಮುಸ್ಲಿಮರ ಮತಗಳ ಬಗ್ಗೆ ಮಾತನ್ನಾಡಿದ್ದಕ್ಕೆ ಹಾಗೂ ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಜನರನ್ನು ಬಂಡೇಳುವಂತೆ ಮಾಡಿರುವ ಆರೋಪವನ್ನು ಹೊರಿಸಲಾಗಿದೆ.

ಎರಡು ವಾರಗಳ  ಹಿಂದೆ ಮಮತಾ ಅವರಿಗೆ ಎರಡು ನೋಟಿಸ್ ಗಳನ್ನು ನೀಡಲಾಗಿತ್ತು.

ನಿರ್ಗಮನ ಚುನಾವಣಾ ಆಯುಕ್ತ ಸುನೀಲ್ ಅರೋರ ಅವರು ಮಮತಾ ಬ್ಯಾನರ್ಜಿಗೆ ಒಂದು ದಿನ ಪ್ರಚಾರ ನಡೆಸದಂತೆ ನಿಷೇಧ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News