×
Ad

ಎ.17ಕ್ಕೆ ಅಮಾಸೆಬೈಲು ಗ್ರಾಪಂನಲ್ಲಿ ಜಿಲ್ಲಾಧಿಕಾರಿಯಿಂದ ಗ್ರಾಮವಾಸ್ತವ್ಯ

Update: 2021-04-12 20:20 IST

ಉಡುಪಿ, ಎ.12: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಮ್ಮ ಮುಂದಿನ ಗ್ರಾಮವಾಸ್ತವ್ಯವನ್ನು ಎ.17ರ ಶನಿವಾರ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಪಂನ ರಟ್ಟಾಡಿ ಮತ್ತು ಮಚ್ಚಟ್ಟು ಗ್ರಾಮದಲ್ಲಿ ಮಾಡಲಿದ್ದಾರೆ.

ಅಂದು ಇಡೀ ದಿನ ಗ್ರಾಮದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ವಾಸ್ತವ್ಯ ಮಾಡುವ ಜಿಲ್ಲಾದಿಕಾರಿಗಳು, ಸಾರ್ವಜನಿಕರ ಸಮಸ್ಯೆ ಕುರಿತ ಅರ್ಜಿಗಳನ್ನು ವಿಲೇವಾರಿ ಮಾಡಲಿದ್ದಾರೆ. ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು/ಗ್ರಾಮಸ್ಥರು ತಮ್ಮ ಅಹವಾಲು ಮತ್ತು ಅರ್ಜಿಗಳನ್ನು ಮುಂಚಿತವಾಗಿ ಗ್ರಾಮಕರಣಿಕರಲ್ಲಿ ನೀಡಬಹುದಾಗಿದ್ದು, ಈ ಅರ್ಜಿಗಳನ್ನು ಗ್ರಾಮ ಭೇಟಿಯ ಸಂದರ್ಭದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News