ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಮಂಗಳವಾರ ಅಧಿಕಾರ ಸ್ವೀಕಾರ

Update: 2021-04-12 15:01 GMT

ಹೊಸದಿಲ್ಲಿ: ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಅವರನ್ನು ನೇಮಿಸಲಾಗಿದೆ. ಅವರು ಮಂಗಳವಾರ ಅಧಿಕಾರ ವಹಿಸಿಕೊಳ್ಳುತ್ತಾರೆ. 2022 ರ ಮೇ 14 ರಂದು ನಿವೃತ್ತಿಯಾಗುವ ಮೊದಲು ಅವರು ಸುಮಾರು ಒಂದು ವರ್ಷ ಕಾಲ ಸೇವೆ ಸಲ್ಲಿಸಲಿದ್ದಾರೆ.

ಲೋಕಸಭಾ ಚುನಾವಣೆಗೆ ವಾರಗಳ ಮುಂಚೆ 2019 ರ ಫೆಬ್ರವರಿಯಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದ ಚಂದ್ರ, ಸುನಿಲ್ ಅರೋರಾ ಅವರ ಬದಲಿಗೆ ಭಾರತದ ಉನ್ನತ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಚಂದ್ರ ಅವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ಸಹಿತ ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲಿದ್ದಾರೆ.

ಚುನಾವಣಾ ಆಯುಕ್ತರಾಗಿ ಎರಡು ವರ್ಷ ಪೂರೈಸಿರುವ ಸುಶೀಲ್ ಚಂದ್ರ ಅವರು ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷರಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News