ದ.ಕ.ಜಿಲ್ಲೆಯ ಮೂವರು ಪಂ.ಅ.ಅಧಿಕಾರಿಗಳಿಗೆ ರ್ಯಾಂಕ್
ಮಂಗಳೂರು, ಎ.12: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯ ಆಪ್ತ ಸಹಾಯಕ ಪರಮೇಶ್ವರ್ ಭಂಡಾರಿ ಸಹಿತ ದ.ಕ.ಜಿಲ್ಲೆಯ ಮೂವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ರ್ಯಾಂಕ್ ಪಡೆದಿದ್ದಾರೆ.
2017ರಲ್ಲಿ ನೂತನವಾಗಿ ಆರಂಭಗೊಂಡ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ವಿವಿಯ ಪ್ರಥಮ ಘಟಿಕೋತ್ಸವು ಶನಿವಾರ ಗದಗದಲ್ಲಿರುವ ವಿವಿ ಸಭಾಂಗಣದಲ್ಲಿ ನಡೆದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪರ್ಯಾಂಕ್ ವಿಜೇತರಿಗೆ ಪದವಿ ಪ್ರದಾನ ಮಾಡಿದರು.
2018-19ನೇ ಸಾಲಿನ ಮೊದಲ ಬ್ಯಾಚ್‌ನಲ್ಲಿ ರಾಜ್ಯದ ವಿಧ ಜಿಲ್ಲೆಗಳ 108 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದು, ಜಿಲ್ಲೆಯ ಪಿಡಿಒ ಪರಮೇಶ್ವರ್ ಭಂಡಾರಿ ಎಂ.ಕಾಂ ಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.
ಎಂ.ಬಿ.ಎ ವಿಭಾಗದಲ್ಲಿ ಕಿಲ್ಪಾಡಿ ಗ್ರಾಪಂ ಪಿಡಿಒ ಪೂರ್ಣಿಮಾ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. 2019-20ನೇ ಸಾಲಿನಲ್ಲಿ 124 ವಿದ್ಯಾರ್ಥಿ ಗಳು ಸ್ನಾತಕೋತ್ತರ ಪದವಿ ಅಭ್ಯಸಿಸಿದ್ದು ಬಾಳ ಗ್ರಾಪಂ ಪಿಡಿಒ ನಿಶಾ ಎಂಎಸ್‌ಡನ್ಲು ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ, ಚಿನ್ನದ ಪದಕ ಪಡೆದಿದ್ದಾರೆ.