×
Ad

ಮಂಗಳೂರು: ಸುಗಮ ಬಸ್ ಸಂಚಾರ

Update: 2021-04-12 21:51 IST

ಮಂಗಳೂರು, ಎ.12: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಮಂಗಳೂರು ವಿಭಾಗದಲ್ಲಿ ಕ್ಷೀಣಿಸುತ್ತಾ ಬಂದಿದ್ದು, ಸೋಮವಾರ ಸುಗಮ ಬಸ್ ಸಂಚಾರ ನಡೆದಿದೆ.

ಸಾರಿಗೆ ನೌಕರರ ಹಾಜರಾತಿಯು ಯುಗಾದಿ ಹಿಂದಿನ ದಿನ (ಸೋಮವಾರ) ಮತ್ತಷ್ಟು ಏರಿಕೆಯಾಗಿದೆ. ಮಂಗಳೂರು ವಿಭಾಗದಿಂದ ಸೋಮವಾರ ಸುಮಾರು 250 ಬಸ್‌ಗಳು ಸಂಚಾರ ಆರಂಭಿಸಿದೆ.

ದೂರ ಪ್ರಯಾಣದ ಹಲವು ಬಸ್‌ಗಳು ಕಳೆದೆರಡು ದಿನಗಳಿಂದ ಸಂಚರಿಸಲಾರಂಭಿಸಿದ್ದರೆ, ಮಂಗಳೂರಿನಿಂದ ಧರ್ಮಸ್ಥಳ, ಪುತ್ತೂರು, ಸುಬ್ರಹ್ಮಣ್ಯ, ಮೈಸೂರು ಮಾರ್ಗದಲ್ಲೂ ಸಂಚರಿಸುವ ಬಸ್ ಗಳ ಸಂಖ್ಯೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News