ರಾಜ್ಯಮಟ್ಟದ ಬೆಂಚ್ ಪ್ರೆಸ್: ದೀಪಾಗೆ ಚಿನ್ನ

Update: 2021-04-12 16:26 GMT

ಮಂಗಳೂರು, ಎ.12: ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ದಾವಣಗೆರೆಯ ಗ್ರೂಪ್ ಆಫ್ ಐರನ್ ಗೇಮ್ಸ್ ಸಂಸ್ಥೆಯು ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ದೀಪಾ ಕೆ.ಎಸ್. ಮಾಸ್ಟರ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಮಹಿಳೆಯರ ಮುಕ್ತ ವಿಭಾಗ (69 ಕಿಲೊ)ದಲ್ಲಿಯೂ ಬೆಳ್ಳಿಯ ಪದಕ ಗೆದ್ದಿದ್ದಾರೆ.

ಕೋಚ್ ಪ್ರದೀಪ್ ಕುಮಾರ್ ಆಚಾರ್ಯರಿಂದ ತರಬೇತಿ ಪಡೆದಿದ್ದ ಅವರು ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿಯ ಪತ್ನಿ. ದೀಪಾರ ಪುತ್ರ ಋತ್ವಿಕ್ ಅಲೆವೂರಾಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News