ಜಿಬೂಟಿ: ದೋಣಿ ಮುಳುಗಿ 34 ವಲಸಿಗರ ಸಾವು

Update: 2021-04-12 17:02 GMT

ಜಿಬೂಟಿ, ಎ. 12: ಆಫ್ರಿಕ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಸಮುದ್ರದಲ್ಲಿ ವಲಸಿಗರನ್ನು ಹೊತ್ತ ದೋಣಿಯೊಂದು ಮುಳುಗಿದ್ದು, 34 ಮಂದಿ ಮೃತಪಟ್ಟಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ವಲಸಿಗರ ಸಂಘಟನೆ (ಐಒಎಮ್) ಸೋಮವಾರ ತಿಳಿಸಿದೆ.

‘‘ಈ ವಲಸಿಗರನ್ನು ಜನರ ಕಳ್ಳಸಾಗಾಣಿಕೆದಾರರು ಸಾಗಿಸುತ್ತಿದ್ದರು. ವಲಸಿಗರ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈ ಜನರ ಕಳ್ಳಸಾಗಾಣಿಕೆದಾರರನ್ನು ಬಂಧಿಸಿ ಶಿಕ್ಷಿಸುವುದು ಆದ್ಯತೆಯಾಗಬೇಕು. ತುಂಬಾ ಜೀವಗಳು ಅನಗತ್ಯವಾಗಿ ನಶಿಸಿವೆ’’ ಎಂದು ಐಒಎಮ್‌ನ ಪೂರ್ವ ಆಫ್ರಿಕ ಮತ್ತು ಹಾರ್ನ್ ಆಫ್ ಆಫ್ರಿಕಕ್ಕಾಗಿನ ಪ್ರಾದೇಶಿಕ ನಿರ್ದೇಶಕ ಮುಹಮ್ಮದ್ ಅಬ್ದಿಕರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News