×
Ad

ಚುನಾವಣಾ ಪ್ರಚಾರಕ್ಕೆ ನಿಷೇಧ:ಆಯೋಗದ ವಿರುದ್ದ ಮಮತಾ ಬ್ಯಾನರ್ಜಿಯಿಂದ ಮಂಗಳವಾರ ಧರಣಿ

Update: 2021-04-12 23:24 IST

ಕೋಲ್ಕತಾ: ಚುನಾವಣಾ ಪ್ರಚಾರ ನಡೆಸದಂತೆ 24 ಗಂಟೆಗಳ ನಿಷೇಧ ಹೇರಿರುವ ಚುನಾವಣಾ ಆಯೋಗದ ನಿರ್ಧಾರ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ಎಂದು ದೂಷಿಸಿರುವ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಮಂಗಳವಾರ ಮಧ್ಯಾಹ್ನ ಧರಣಿ ನಡೆಸಲಿದ್ದಾರೆ.

"ಭಾರತದ ಚುನಾವಣಾ ಆಯೋಗದ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ನಿರ್ಧಾರವನ್ನು ವಿರೋಧಿಸಿ, ನಾನು ನಾಳೆ ಮಧ್ಯಾಹ್ನ 12 ರಿಂದ ಕೋಲ್ಕತ್ತಾದ ಗಾಂಧಿ ಮೂರ್ತಿ ಬಳಿ ಧರಣಿ ಕುಳಿತುಕೊಳ್ಳುತ್ತೇನೆ" ಎಂದು ಮಮತಾ ಸೋಮವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ. ನಿರ್ಗಮನ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಈ ಆದೇಶ ಹೊರಡಿಸಿದ್ದರು.

ತೃಣಮೂಲ ಕಾಂಗ್ರೆಸ್ ಆಯೋಗದ ಆದೇಶವನ್ನು ತೀವ್ರವಾಗಿ ಖಂಡಿಸಿದೆ.

ಚುನಾವಣಾ ಆಯೋಗ ಎಂದರೆ ಎಕ್ಸ್ಟ್ರಿಮ್ಲಿ ಕಾಂಪ್ರಮೈಸ್(ಅತ್ಯಂತ ಹೊಂದಾಣಿಕೆ)ಆಗಿದೆ. ಎಪ್ರಿಲ್ 12 ಪ್ರಜಾಪ್ರಭುತ್ವದ ಕರಾಳ ದಿನ ಎಂದು ಟಿಎಂಸಿ ಸಂಸದ ಡರೆನ್ ಒಬ್ರಿಯಾನ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News