ಮಂಗಳೂರು: ಆರ್ಕಿಟೆಕ್‌ಗಳಿಗೆ ಕಾರ್ಯಾಗಾರ

Update: 2021-04-13 04:59 GMT

ಮಂಗಳೂರು : ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಇಂಟೀರಿಯರ್ ಡಿಸೈನರ್ಸ್‌ (ತ್ರಿಪಲ್ ಐಡಿ) ಸಂಸ್ಥೆಯು ದೇಶಾದ್ಯಂತ ಆರ್ಕಿಟೆಕ್ ಮತ್ತು ಇಂಜಿನಿಯರ್‌ಗಳಿಗೆ ಪ್ರಮುಖ ನಗರಗಳಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸುತ್ತಿದೆ.

ಅದರಂತೆ ತ್ರಿಪಲ್ ಐಡಿ ಇದರ ಮಂಗಳೂರು ಘಟಕದ ವತಿಯಿಂದ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಝೆಡ್ಸ್ ಹೋಮ್ ಫೆಬ್‌ನ ಸಹಕಾರದಲ್ಲಿ ಶನಿವಾರ ಫೆಬ್‌ನ ಮಳಿಗೆಯಲ್ಲಿ ಆರ್ಕಿಟೆಕ್ ಮತ್ತು ಯುವ ಇಂಜಿನಿಯರ್, ಕಟ್ಟಡ ನಿರ್ಮಾಪಕರಿಗೆ ವಿನ್ಯಾಸದ ಕುರಿತಂತೆ ವಿಶೇಷ ಕಾರ್ಯಾಗಾರ ಆಯೋಜಿಸಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ 2ಪಿಕೆಎಂ ಸಂಸ್ಥೆಯ ಪ್ರೊ.ನೆಲ್ಸನ್ ಜಾಯ್ ವಿಜಯ್ ಪಾಯಸ್ ಆರ್ಕಿಟೆಕ್ ಕ್ಷೇತ್ರದಲ್ಲಿ ತನ್ನ ಅನುಭವವನ್ನು ಹಂಚಿಕೊಂಡರಲ್ಲದೆ, ಕಟ್ಟಡ ನಿರ್ಮಾಣ, ವಿನ್ಯಾಸ, ಒಳಾಂಗಣ ವಿನ್ಯಾಸದ ಬಗ್ಗೆ ವಿವರಿಸಿದರು. ಅಲ್ಲದೆ ಶಿಬಿರಾರ್ಥಿಗಳ ಪ್ರಶ್ನೆ, ಸಂಶಯಗಳಿಗೆ ಉತ್ತರಿಸಿದರು.

ಮಂಗಳೂರಿನ ಇಂಡಿಯನ್ ಡಿಸೈನ್ ಸ್ಕೂಲ್ ಹಾಗೂ ತ್ರಿಪಲ್ ಐಡಿ ಇದರ ಅಧ್ಯಕ್ಷ ಮುಹಮ್ಮದ್ ನಿಸಾರ್, ಉಪಾಧ್ಯಕ್ಷ ಅನಿಲ್ ಪೈ, ಝೆಡ್ಸ್ ಹೋಮ್ ಫೆಬ್‌ನ ಪಾಲುದಾರರಾದ ಮುಹಮ್ಮದ್ ಝುಬೈರ್, ಮುಹಮ್ಮದ್ ಝಹೀರ್, ಮುಹಮ್ಮದ್ ಝಾಕಿರ್ ಉಪಸ್ಥಿತರಿದ್ದರು.

ಸುಮಯ್ಯ ಶೇಖ್ ಝೆಡ್ಸ್ ಹೋಮ್ ಸಂಸ್ಥೆಯ ಬಗ್ಗೆ ಪರಿಚಯ ನೀಡಿದರು. ನಿಖಿಲ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News