ಸುರತ್ಕಲ್ ಜನತಾ ಕಾಲನಿಯ ಮಸೀದಿಗೆ ಕಲ್ಲೆಸೆದ ಪ್ರಕರಣ: ಅಪ್ರಾಪ್ತ ಬಾಲಕರು ಬಾಲನ್ಯಾಯ ಮಂಡಳಿಗೆ ಹಾಜರು

Update: 2021-04-13 07:29 GMT

ಮಂಗಳೂರು, ಎ.13:ಸುರತ್ಕಲ್ ಸಮೀಪದ ಜನತಾ ಕಾಲನಿಯ ಸಾದುಲಿ ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸಕ್ಕೆ ಕಲ್ಲೆಸೆದ ಪ್ರಕರಣದ ಆಪ್ರಾಪ್ತ ಬಾಲಕರನ್ನು ಮಂಗಳೂರಿನ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರು ಅಪ್ತಾಪ್ತರಾದ ಕಾರಣ ಪೊಲೀಸರು ಅವರ ಹೆಸರು ಸಹಿತ ಯಾವುದೇ ಕುರುಹನ್ನು ಬಹಿರಂಗಪಡಿಸಿಲ್ಲ. ಎ.3ರ ರಾತ್ರಿ ಸುಮಾರು 2:30ರ ವೇಳೆಗೆ ದ್ವಿಚಕ್ರ ವಾಹನವೊಂದರಲ್ಲಿ ಬಂದ ದುಷ್ಕರ್ಮಿಗಳು ಮಸೀದಿಗೆ ಕಲ್ಲೆಸೆದಿದ್ದರು. ಇದರಿಂದ ಮಸೀದಿಯ ಕಿಟಕಿಯ ಗಾಜಿಗೆ ಹಾನಿಯಾಗಿತ್ತು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು ಪರಿಸರದ ಎಲ್ಲಾ ಸಿಸಿ ಕ್ಯಾಮರಾವನ್ನು ಪರಿಶೀಲಿಸಿ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಅವರನ್ನು ಬಂಧಿಸಿ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News