ಅರಬ್ಬೀ ಸಮುದ್ರದಲ್ಲಿ ಬೋಟ್ ‌ಮುಳುಗಡೆ: ಮೂವರು ಮೀನುಗಾರರ ಮೃತದೇಹ ಪತ್ತೆ

Update: 2021-04-13 15:28 GMT
ಸಾಂದರ್ಭಿಕ ಚಿತ್ರ

ಮಂಗಳೂರು: ಸುರತ್ಕಲ್ ಲೈಟ್ ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದ ಅರಬ್ಬೀ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ಮೃತಪಟ್ಟ ಮೂವರು ಮೀನುಗಾರರ ಮೃತದೇಹವನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವರ್ಗ ಮಂಗಳವಾರ ಪತ್ತೆ ಹಚ್ಚಿದೆ. ಆ ಪೈಕಿ ಮಾಣಕ್ಯದಾಸ್ ಮತ್ತು ಅಲೆಗ್ಸಾಂಡರ್ ಎಂಬವರ ಗುರುತು ಹಿಡಿಯಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.

ಈ ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಇತರ ಒಂಭತ್ತು ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಕೋಸ್ಟ್‌ಗಾರ್ಡ್‌ನವರು ಶೋಧಕಾರ್ಯ ಮುಂದುವರಿಸಿದ್ದಾರೆ. ರಕ್ಷಿಸಲ್ಪಟ್ಟ ಇಬ್ಬರು ಮತ್ತು ಮೂವರ ಮೃತದೇಹವನ್ನು ಕಡಲ ಕಿನಾರೆಗೆ ತಂದು ಕೋಸ್ಟ್‌ಗಾರ್ಡ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ.‌ ಈ ಘಟನೆಯಲ್ಲಿ ರಕ್ಷಿಸಲ್ಪಟ್ಟವರನ್ನು ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಮತ್ತು‌ ತಮಿಳುನಾಡಿನ ವೆಲು ಮುರುಗನ್ ರಾಮಲಿಂಗನ್‌ ಎಂದು ಗುರುತಿಸಲಾಗಿದೆ.

ಎ.11ರಂದು ಬೆಳಗ್ಗೆ 10 ಗಂಟೆಗೆ ಕೇರಳದ ಬೇಪೂರ್‌ನಿಂದ ಹೊರಟ ಮೀನುಗಾರಿಕೆಯ ಈ ಬೋಟ್ ಸೋಮವಾರ ತಡರಾತ್ರಿ ಸುಮಾರು 2:05ರ ವೇಳೆಗೆ ಮುಳುಗಡೆಯಾಯಿತು. ಸಮೀಪದಲ್ಲೇ ಇದ್ದ ಇನ್ನೊಂದು ಹಡಗು ಮತ್ತು ಮಾಹಿತಿ ‌ಪಡೆದ ಕೋಸ್ಟ್‌ಗಾರ್ಡ್ ಸಿಬ್ಬಂದಿ ವರ್ಗವು ತುರ್ತು ಕಾರ್ಯಾಚರಣೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News