ಎಂಬಿಎ ವಿಭಾಗದಲ್ಲಿ ಭಟ್ಕಳದ ಮೇಘಾ ನಾಯಕ ಪ್ರಥಮ ರ್ಯಾಂಕ್
Update: 2021-04-13 14:43 IST
ಭಟ್ಕಳ: ಮಂಗಳೂರು ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದಲ್ಲಿ ಭಟ್ಕಳದ ಮೇಘಾ ನಾಯಕ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. ಮಂಗಳೂರಿನ ಮನೇಲ್ ಶ್ರೀನಿವಾಸ ನಾಯಕ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಎಂ.ಬಿ.ಎ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದ ಇವರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಉಭಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತನ್ನ ಪದವಿ ವಿದ್ಯಾಭ್ಯಾಸವನ್ನು ನಗರದ ಶ್ರೀ ಸುಧೀಂದ್ರ ಕಾಲೇಜಿನಲ್ಲಿ ಪೂರೈಸಿದ್ದ ಇವರು, ನಂದಾ ಮತ್ತು ನರಸಿಂಹ ನಾಯಕ ಇವರ ಪುತ್ರಿ. ಈಕೆಯ ಸಾಧನೆಯನ್ನು ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಚಾರ್ಯರು, ಬೋಧಕ ವರ್ಗ ಅಭಿನಂದಿಸಿದೆ.