×
Ad

ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನ ಪ್ರೊ.ಅಲ್ತಾಫ್ ರಿಗೆ ಡಾಕ್ಟರೇಟ್ ಪದವಿ

Update: 2021-04-13 18:22 IST

ಭಟ್ಕಳ: ನಗರದ ಅಂಜುಮಾನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮೆನೇಜ್‍ಮೆಂಟ್ ಕಾಲೇಜಿನ ಪ್ರೊ.ಅಲ್ತಾಫ್ ಮುದೋಳ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಪಿ.ಎಚ್‍ಡಿ ಪದವಿಯನ್ನು ಪ್ರದಾನಿಸಿದೆ. 

ಅಲ್ತಾಫ್ ಮುದೋಳ ಅವರು ಮಂಡಿಸಿದ್ದ ಪ್ರಬಂಧವನ್ನು ಪರಿಗಣಿಸಿದ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಇವರಿಗೆ ಪಿ.ಎಚ್‍ಡಿ. ಪ್ರಧಾನ ಮಾಡಿದೆ. ನಿಟ್ಟೆಯ ಎನ್.ಎಂ.ಎ.ಎಮ್. ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಜಿಯ ಡಾ. ಪಿಂಟೋ ಪಿಯೂಸ್ ಎ.ಜೆ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ 'ಪವರ್ ಎಲೆಕ್ಟ್ರೋನಿಕ್ಸ್ ಇಂಟರ್‍ಫೇಸ್ ಯುನಿಟ್ ವಿತ್ ಕಂಟ್ರೋಲರ್ ಫಾರ್ ಎ ಸ್ಟಾಂಡ್ ಅಲೋನ್ ಫೋಟೋ ವೋಲ್ಟೆಕ್ ಸೋಲಾರ್ ಸಿಸ್ಟಮ್' ಪ್ರಬಂಧಕ್ಕೆ ಪಿ.ಎಚ್‍.ಡಿ. ಪ್ರದಾನ ಮಾಡಲಾಗಿದೆ. 

ಮೂಲತಃ ಬಾಗಲಕೋಟೆಯವರಾದ ಇವರು, ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 1999ರಲ್ಲಿ ಲ್ಯಾಬ್ ಸಹಾಯಕರಾಗಿ ಸೇವೆಗೆ ಸೇರಿಕೊಂಡರು. ನಂತರ 2010ರಲ್ಲಿ ಎ.ಎಂ.ಐ.ಇ. ಪದವಿ ಪರೀಕ್ಷೆ ಬರೆದು 2012ರಲ್ಲಿ ಎಂ.ಟೆಕ್ ಪೂರೈಸಿದರು. ಪ್ರಸ್ತುತ ಇವರು ಅಂಜುಮಾನ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮೆನೇಜ್‍ಮೆಂಟ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News