×
Ad

ಮಂಗಳೂರು: ಬಿಜೈ ಮತ್ತು ಪಾಂಡೇಶ್ವರದಲ್ಲಿ ಬೋಳಾಸ್‌ನ ಎರಡು ಫ್ಯಾಕ್ಟರಿ ಔಟ್‌ಲೆಟ್‌ಗಳು ಶುಭಾರಂಭ

Update: 2021-04-14 17:28 IST

ಮಂಗಳೂರು, ಎ.14: ಡ್ರೈ ಫ್ರುಟ್ಸ್ ಮತ್ತು ನಟ್ಸ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ತನ್ನ 4ನೇ ಮತ್ತು 5ನೇ ಫ್ಯಾಕ್ಟರಿ ಔಟ್‌ಲೆಟ್‌ಗಳನ್ನು ಮಂಗಳೂರಿನ ಬಿಜೈ ಮತ್ತು ಪಾಂಡೇಶ್ವರದಲ್ಲಿ ಪ್ರಾರಂಭಿಸುತ್ತಿದೆ. ಸದ್ಯ ಕಂಪೆನಿಯ ಕಾರ್ಖಾನೆ ಮಳಿಗೆಗಳು ಕೆದಿಂಜೆ, ಸುರತ್ಕಲ್ ಮತ್ತು ಕುಂದಾಪುರದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ.

ಡ್ರೈ ಫ್ರುಟ್ಸ್‌ಗಳ ನಿಯಮಿತ ಸೇವನೆ ಆರೋಗ್ಯಕಾರಿ. ಇದು ಈ ಸಾಂಕ್ರಾಮಿಕ ರೋಗಗಳ ಕಾಲದಲ್ಲಿ ಅಗತ್ಯವಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಡ್ರೈ ಫ್ರುಟ್ಸ್‌ಗಳು ತುಂಬಾ ದುಬಾರಿ ಎಂಬ ತಪ್ಪುಕಲ್ಪನೆ ಹೆಚ್ಚಿನ ಜನರಲ್ಲಿದೆ. ಆದರೆ ಬೋಳಾಸ್ ಫ್ಯಾಕ್ಟರಿ ಔಟ್‌ಲೆಟ್‌ಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳು ಕೈಗೆಟುಕುವ ದರಗಳಲ್ಲಿ ಗ್ರಾಹಕರಿಗೆ ಲಭಿಸಲಿದೆ ಎಂದು ಎಂದು ಕಂಪನಿಯ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬೋಳಾಸ್ ಆಗ್ರೋ ಪ್ರೈ.ಲಿ. ಭಾರತದ ಅತಿದೊಡ್ಡ ಗೋಡಂಬಿ ಸಂಸ್ಕರಣಾ ಘಟಕವನ್ನು ಹೊಂದಿದ್ದು, ಬಾದಾಮಿ, ವಾಲ್ನಟ್ಸ್, ಪಿಸ್ತಾ, ಖರ್ಜೂರ ಮತ್ತು ಇತರ ಡ್ರೈ ಫ್ರುಟ್ಸ್‌ಗಳನ್ನೂ ಸಂಸ್ಕರಿಸುತ್ತಾರೆ. ಉತ್ಪನ್ನವನ್ನು ತಾಜಾವಾಗಿರುವಂತೆ 5,000 ಚದರ ಅಡಿಗಿಂತ ಹೆಚ್ಚು ಕೋಲ್ಡ್ ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ. ಕಂಪೆನಿಯು 20ಕ್ಕೂ ಹೆಚ್ಚು ದೇಶಗಳಲ್ಲಿ ಖರೀದಿ ಜಾಲವನ್ನು ಹೊಂದಿದೆ ಮತ್ತು ಉತ್ಪನ್ನಗಳನ್ನು ಅಲ್ಲಿಂದ ನೇರವಾಗಿ ಆಮದು ಮಾಡಿಕೊಳ್ಳುತ್ತದೆ. ಅದೇರೀತಿ, ತಮ್ಮ ಉತ್ಪನ್ನಗಳನ್ನು 60ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ. ಕಂಪೆನಿಯು ನಿರ್ಯಾತ ಶ್ರೀ ರಾಷ್ಟ್ರ ಪ್ರಶಸ್ತಿ ಸಹಿತ ತನ್ನ ಉತ್ಪನ್ನಗಳಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನೇಕ ಪ್ರಶಸ್ತಿಗಳನ್ನು ಗಳಿಸಿದೆ ಎಂದವರು ತಿಳಿಸಿದ್ದಾರೆ.

ಕಂಪೆನಿಯು ಏಳುನೂರಕ್ಕೂ ಹೆಚ್ಚು ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಅಲ್ಲದೆ 75 ಉದ್ಯೋಗಿಗಳಲ್ಲಿ 75 ಶೇ.ಕ್ಕಿಂತ ಹೆಚ್ಚು ಮಹಿಳೆಯರಾಗಿದ್ದಾರೆ. ಮಂಗಳೂರಿನಲ್ಲಿ ಎರಡು ಫ್ಯಾಕ್ಟರಿ ಔಟ್‌ಲೆಟ್‌ಗಳನ್ನು ತೆರೆಯುವುದರಿಂದ ಇಲ್ಲಿನ ನಿವಾಸಿಗಳು ಈಗ ಅಂತರ್‌ರಾಷ್ಟ್ರೀಯ ಗುಣಮಟ್ಟದ ಡ್ರೈ ಫ್ರುಟ್ಸ್‌ಗಳನ್ನು ಕಾರ್ಖಾನೆ ಬೆಲೆಯಲ್ಲಿ ಖರೀದಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News