ಕಾಸರಗೋಡು: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮೃತ್ಯು

Update: 2021-04-14 12:28 GMT

ಕಾಸರಗೋಡು: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ವೆಸ್ಟ್ ಎಳೇರಿ ಸಮೀಪದ ಪರಪ್ಪಚ್ಚಾಲ್ ಎಂಬಲ್ಲಿ  ನಡೆದಿದೆ.

ಕಾವುಂದಳದ ರೆಜಿ ಎಂಬವರ ಪುತ್ರ ಆಲ್ಬಿನ್ ( 15)  ಹಾಗೂ ರೆಜಿ ಅವರ ಸಹೋದರ ಥಾಮಸ್ ಎಂಬವರ ಪುತ್ರ ಬ್ಲಾಸನ್  ಥಾಮಸ್ ( 20) ಮೃತಪಟ್ಟವರು. ಆಲ್ಬಿನ್ ವಾರಕ್ಕೋಡ್  ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಹಾಗೂ ಥಾಮಸ್ ಮಂಗಳೂರು  ಡಾ.ಎಂ. ವಿ ಶೆಟ್ಟಿ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದನು.

ಷು ಹಬ್ಬದ ಹಿನ್ನಲೆಯಲ್ಲಿ ಇಬ್ಬರು ಪರಪ್ಪಚಾಲ್ ನ ಸ್ನೇಹಿತನ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಸಮೀಪದ ಚೈತ್ರ ವಾಹಿನಿ ನದಿಗೆ ಸ್ನಾನಕ್ಕಿಳಿದ ಸಂದರ್ಭ ಈ ಘಟನೆ  ನಡೆದಿದೆ.  

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ  ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News