×
Ad

ಪರಿಸರ ರಕ್ಷಣೆಗಾಗಿ ಸೈಂಟ್ ಮೇರೀಸ್‌ನಿಂದ ಮಲ್ಪೆ ಬೀಚ್‌ವರೆಗೆ ಈಜು

Update: 2021-04-14 18:42 IST

ಉಡುಪಿ, ಎ.14: ಕರಂಬಳ್ಳಿ ಸ್ವಿಮ್ಮರ್ಸ್ ತಂಡದ 15 ಮಂದಿ ಬುಧವಾರ ಮುಂಜಾನೆ ಸೈಂಟ್ ಮೇರೀಸ್ ದ್ವೀಪದಿಂದ ಮಲ್ಪೆ ಕಡಲ ಕಿನಾರೆಯವರೆಗೆ ಈಜು ಮೂಲಕ ಸಮುದ್ರಕ್ಕೆ ಕಸ, ಕಲ್ಮಶ ಎಸೆಯದೆ, ಪರಿಸರ ರಕ್ಷಣೆಯ ಸಂದೇಶ ಸಾರಿದ್ದಾರೆ.

ಆರ್.ಕೆ.ರಮೇಶ್ ಪೂಜಾರಿ ನೇತೃತ್ವದ ತಂಡದಲ್ಲಿ ಪ್ರಕಾಶ್ ಜೋಗಿ, ನಿತ್ಯಾನಂದ ಜೋಗಿ, ಪ್ರಶಾಂತ್, ವಿಜಯರಾಜ್, ಕೇಶವ ಗೌಡ, ಆನಂದ ಹೊಳ್ಳ, ಲೋಕೇಶ ಪಾಲನ್, ದಿನೇಶ್ ಜತ್ತನ್, ಸಾತ್ವಿಕ್ ಜತ್ತನ್, ಮಿಥುನ್, ಸತೀಶ್ ಪೂಜಾರಿ, ಗೋಪಾಲ ಪಾಲನ್, ದೀಪಕ್ ಶೇಠ್, ವಿಘ್ನೇಷ್ ಆಚಾರ್ಯ 3.09 ಕಿ.ಮೀ ದೂರವನ್ನು 2.45 ಗಂಟೆಯಲ್ಲಿ ಈಜಿ ದಡ ಸೇರಿದರು. ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ಮತ್ತು ಸಂಜೆ ಈಜಾಡುವ, ಆಸಕ್ತರಿಗೆ ಈಜು ಕಲಿಸುವ ಈ ತಂಡದಲ್ಲಿ ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು 70 ವರ್ಷದ ಹಿರಿಯರೂ ಜೊತೆಗಿದ್ದಾರೆ. ಎಲ್ಲರಿಗೂ ಉಚಿತ ತರಬೇತಿ, ಈಜಿನ ಜೊತೆಗೆ ಕೆರೆಯ ಸ್ವಚ್ಛತೆ, ನೀರು, ಪರಿಸರದ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಈ ತಂಡ ನಿರಂತರವಾಗಿ ಮಾಡುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News