×
Ad

ಕೆಂಜಾರು: ರೈಲ್ವೆ ಜಂಕ್ಷನ್‌ನಲ್ಲಿ ಸೆಲ್ಫಿ ತೆಗೆಯುವಾಗ ವಿದ್ಯುತ್ ತಂತಿ ತಗಲಿ ಬಾಲಕನಿಗೆ ಗಂಭೀರ ಗಾಯ

Update: 2021-04-14 20:54 IST

ಮಂಗಳೂರು, ಎ.14: ಗೂಡ್ಸ್ (ಎಲ್‌ಪಿಜಿ ಟ್ಯಾಂಕರ್) ವ್ಯಾಗನ್ ಹತ್ತಿ ಸೆಲ್ಫಿ ತೆಗೆಯುವ ವೇಳೆ ವಿದ್ಯುತ್ ತಂತಿ ತಗಲಿದ ಪರಿಣಾಮ ಬಾಲಕನೊಬ್ಬ ಗಂಭೀರ ಗಾಯಗೊಂಡ ಘಟನೆ ಬಜ್ಪೆ ಸಮೀಪದ ಕೆಂಜಾರು ಗೂಡ್ಸ್ ರೈಲ್ವೆ ಜಂಕ್ಷನ್‌ನಲ್ಲಿ ಬುಧವಾರ ಅಪರಾಹ್ನ ನಡೆದಿದೆ.

ಜೋಕಟ್ಟೆಯ ಎಚ್‌ಪಿಸಿಎಲ್ ಕಾಲನಿಯ ಮುಹಮ್ಮದ್ ಇಕ್ಬಾಲ್ ಎಂಬವರ ಪುತ್ರ ಮುಹಮ್ಮದ್ ದಿಶಾನ್ (16) ಗಂಭೀರ ಗಾಯಗೊಂಡ ಬಾಲಕ. ಈತನ ಮೈಯಲ್ಲಿ ಶೇ.50ರಷ್ಟು ಸುಟ್ಟ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಹಮ್ಮದ್ ದಿಶಾನ್ ತನ್ನ ಸ್ನೇಹಿತರ ಜೊತೆಗೂಡಿ ಆಟವಾಡಲು ಹೋಗಿದ್ದ. ಮನೆಯ ಸಮೀಪವೇ ಇದ್ದ ಕೆಂಜಾರಿನ ಗೂಡ್ಸ್ ರೈಲ್ವೆ ಜಂಕ್ಷನ್‌ನಲ್ಲಿ ನಿಂತಿದ್ದ ಗೂಡ್ಸ್ ವ್ಯಾಗನ್ ಹತ್ತಿ ಸೆಲ್ಫಿ ತೆಗೆಯತೊಡಗಿದ. ಸ್ನೇಹಿತರು ಕೆಳಗೆ ನಿಂತಿದ್ದರೆ, ಈತ ವ್ಯಾಗನ್ ಹತ್ತಿದ್ದ. ಅದರ ಮೇಲೆಯೇ ಟಿಆರ್‌ಡಿ ಲೈನ್ ಇದ್ದು, ಅದರ ಬಗ್ಗೆ ಅರಿವಿಲ್ಲದ ದಿಶಾನ್ ಸೆಲ್ಫಿ ತೆಗೆಯುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದೆ. ಇದರಿಂದ ದಿಶಾನ್ ಮೈಯಿಡೀ ಸುಟ್ಟು ಗಾಯವಾಯಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News