ಸೌಮ್ಯಲತಾಗೆ ಪಿಎಚ್‌ಡಿ ಪದವಿ
Update: 2021-04-14 21:16 IST
ಉಡುಪಿ, ಎ.14: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕಿ ಸೌಮ್ಯಲತಾ ಪಿ. ಅವರು, ಡಾ. ಮೋಹನ ಕುಂಟಾರ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಕಾವ್ಯಗಳಲ್ಲಿ ನಾಡು-ನುಡಿಯ ಪ್ರತಿನಿಧೀಕರಣ’ ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ. ಇವರು ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಹರಿಶ್ಚಂದ್ರ ಹೆಬ್ಬಾರರ ಪತ್ನಿ.