ಪತ್ರಕರ್ತರ ಸಂಘದ ಯೋಗ ಶಿಬಿರದಲ್ಲಿ ಯುಗಾದಿ ಆಚರಣೆ
Update: 2021-04-14 21:28 IST
ಮಂಗಳೂರು, ಎ.14: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್ನಲ್ಲಿ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಬುಧವಾರ ಯುಗಾದಿ ಹಾಗೂ ವಿಷು ಹಬ್ಬವನ್ನು ಆಚರಿಸಲಾಯಿತು.
ಎಸ್‌ಡಿಎಂ ಬಿಸಿನೆಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ದೇವರಾಜ್ ಯುಗಾದಿ ಸಂದೇಶ ನೀಡಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಸುಬ್ರಾಯ ನಾಯಕ್, ಯೋಗಗುರು ಜಗದೀಶ್ ಶೆಟ್ಟಿ ಬಿಜೈ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತ ರಾಘವ ಶುಭ ಹಾರೈಸಿದರು. ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ.ಭಟ್ ವಂದಿಸಿದರು.