ರಮಝಾನ್: ಪೊಲೀಸ್ ಸಹಕಾರಕ್ಕೆ ಮುಸ್ಲಿಮ್ ಒಕ್ಕೂಟ ಮನವಿ

Update: 2021-04-14 16:13 GMT

ಮಂಗಳೂರು, ಎ.14: ರಮಝಾನ್‌ನಲ್ಲಿ ಮುಸ್ಲಿಮರು ಬೆಳಗ್ಗಿನ ನಮಾಝ್, ಮುಸ್ಸಂಜೆಯ ಇಫ್ತಾರ್ ಮತ್ತು ರಾತ್ರಿಯ ವಿಶೇಷ ತರಾವೀಹ್ ನಮಾಝ್ಗೆ ಮಸೀದಿಗಳಿಗೆ ತೆರಳುವ ಸಂದರ್ಭ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ಸಹಕರಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಯೋಗವು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಅಬ್ದುಲ್ ಜಲೀಲ್ ಅದ್ದಾಕ ಕೃಷ್ಣಾಪುರ, ಮುಸ್ತಫಾ ಸಿಎಂ, ಮುಹಮ್ಮದ್ ಹನೀಫ್ ಯು, ಹಿದಾಯತ್ ಮಾರಿಪಲ್ಲ, ಸೋಶಿಯಲ್ ಫಾರೂಕ್, ನೌಷಾದ್ ಬಂದರ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News