ಮುಸ್ಲಿಂ ಓಟ್ ಬ್ಯಾಂಕ್ ತಯಾರಿ ಮಾಡಿ ಮೀಸಲಾತಿ ಸೆಮಿನಾರ್ ನಲ್ಲಿ ಶಶಿಧರ ಹೆಮ್ಮಾಡಿ

Update: 2021-04-14 16:29 GMT

ಬ್ರಹ್ಮಾವರ, ಎ.14: ಮುಸ್ಲಿಮರು ಸರಿಯಾಗಿ ರಾಜಕೀಯವನ್ನು ಪಡೆಯ ಬೇಕಾದರೆ ಓಟು ಬ್ಯಾಂಕ್ ತಯಾರಿ ಮಾಡಬೇಕು. ಯಾರ ಗುಲಾಮರು ಆಗಬಾರದು ಅಗತ್ಯ ಸಂದರ್ಭಗಳಲ್ಲಿ ಒಕ್ಕೊರಲಿನ ಧ್ವನಿ ಎತ್ತಬೇಕು. ಧಾರ್ಮಿಕ ವಿಷಯಕ್ಕೆ ಧಕ್ಕೆ ಬಂದಾಗ ಯಾವ ರೀತಿಯಲ್ಲಿ ಪ್ರತಿಭಟಿ ಸುತ್ತಾರೋ ಇಂತಹ ಸಂದರ್ಭಗಳಲ್ಲೂ ಅಂತಹ ಪ್ರತಿಭಟನೆ ನಡೆಸಬೇಕು ಎಂದು ಪತ್ರಕರ್ತ ಶಶಿಧರ ಹೆಮ್ಮಾಡಿ ಹೇಳಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ನಿರ್ದೇಶನ ಮೇರೆಗೆ ಉಡುಪಿ ಜಿಲ್ಲಾ ಸಮಿತಿಯು ಬ್ರಹ್ಮಾವರ ಸಿಟಿ ಸೆಂಟರ್ ಹಾಲ್ನಲ್ಲಿ ಹಮ್ಮಿಕೊಂಡ ಮುಸ್ಲಿಂ ಮೀಸಲಾತಿ ಪ್ರಾಯೋಗಿಕವೇ ಎಂಬ ವಿಚಾರಗೋಷ್ಠಿ ಯಲ್ಲಿ ಅವರು ಮಾತನಾಡುತಿದ್ದರು.

ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ.ಶಾಫಿ ಸಅದಿ ಮಾತನಾಡಿ, ನಮ್ಮ ಸಮುದಾಯಕ್ಕೆ ಸಿಗುವ ಮೀಸಲಾತಿಯನ್ನು ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ ಜನಸಂಖ್ಯೆಗೆ ಹೋಲಿಸಿದರೆ ನಮ್ಮಲ್ಲಿ ಇರಬೇಕಾದ ಶಾಸಕ ಹಾಗೂ ಸಂಸದರು ಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿದೆ ಎಂದರು

ಜಿಲ್ಲಾ ಉಪಾಧ್ಯಕ್ಷ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಮಾಅತ್ ಉಡುಪಿ ಜಿಲ್ಲಾಧ್ಯಕ್ಷ ಬಿಎಸ್‌ಎಫ್ ರಫೀಕ್ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಅಬ್ದುಲ್ ಹಮೀದ್ ಬಜ್ಪೆದಿಕ್ಸೂಚಿ ಭಾಷಣ ಮಾಡಿದರು.

ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಹಾಜಿ ಅಬೂಬಕ್ಕರ್ ನೇಜಾರು, ಅಶ್ರಫ್ ಕಿನಾರ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಕೆ.ಪಿ.ಇಬ್ರಾಹಿಂ ಮಟಪಾಡಿ ಮೊದ ಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಲ್ಯಾಸ್ ನಾವುಂದ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News