ಕೆಎಸ್ಸಾರ್ಟಿಸಿ ಮುಷ್ಕರ: ಮಾತುಕತೆಗೆ ಮನವಿ

Update: 2021-04-14 16:58 GMT

ಪುತ್ತೂರು: ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಯೊಂದರ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದ್ದು ಇದರಿಂದಾಗಿ ಜನಸಾಮಾನ್ಯರು ಪರದಾಟ ನಡೆಸುವಂತಾಗಿದೆ. ಅನೇಕ ನೌಕರರ ವಜಾ, ಅಮಾನತು, ಅಂತರ್ ವಿಭಾಗ ವರ್ಗಾವಣೆ ನಡೆದಿದೆ. ಈ ದಿಸೆಯಲ್ಲಿ ಸಂಸ್ಥೆಯ ಹಿತದೃಷ್ಠಿಯಿಂದ ಸರಕಾರವು ಮುಷ್ಕರವನ್ನು ಸುಖ್ಯಾಂತ್ಯಗೊಳಿಸುವಂತೆ ಮಧ್ಯ ಪ್ರವೇಶಿಸಿ ಮಾತುಕತೆ ನಡೆಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ಅಧ್ಯಕ್ಷ ರಾಮಕೃಷ್ಣ ಪೂಂಜ ಅವರಿಗೆ ಕೆಎಸ್‍ಆರ್‍ಟಿಸಿ ಮಜ್ದೂರ್ ಸಂಘದ ಪುತ್ತೂರು ವಿಭಾಗ ವಕ್ತಾರ ಶಾಂತರಾಮ ವಿಟ್ಲ ಮನವಿ ಮಾಡಿದ್ದಾರೆ. 

ಸರಕಾರದ ಜೊತೆಗೆ ಸೌಹಾರ್ದಯುತ ಸಂಧಾನ ನಡೆಸುವ ಮೂಲಕ ಮುಷ್ಕರವನ್ನು ಮುಕ್ತಾಯವಾಗುವಂತೆ ಪ್ರಯತ್ನಿಸಬೇಕೆಂದು ಅವರು ವಿನಂತಿಸಿದ್ದಾರೆ. ಮುಷ್ಕರದ ವ್ಯವಸ್ಥೆ ಇದೇ ರೀತಿ ಮುಂದುವರಿದರೆ ಆಗಬಹುದಾದ ಅಪಾಯದ ಪರಿಸ್ಥಿತಿಯು ತಮ್ಮ ಗಮನಕ್ಕೂ ಬಂದಿರಬಹುದು. ಕಾರ್ಮಿಕರ ಸಮಸ್ಯೆಗಳ ಕುರಿತು ಆಗಬಹುದಾದ ಪರಿಹಾರ ಕ್ರಮಗಳನ್ನು ಮಾತುಕತೆಯ ಮೂಲಕ ಪರಿಹರಿಸುವಂತೆ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News