ಸುಳ್ಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 130 ನೇ ಜನ್ಮದಿನಾಚರಣೆ

Update: 2021-04-14 17:04 GMT

ಸುಳ್ಯ: ದೇಶದ ಅಭಿವೃದ್ಧಿ, ಸಮಾನತೆಗೆ ಮುನ್ನಡಿ ಬರೆದ ಮಹಾನ್ ನಾಯಕ ಡಾ.ಬಿ. ಆರ್. ಅಂಬೇಡ್ಕರ್ ರವರು. ಅವರ ತತ್ವ, ನಿಷ್ಠೆ, ಆದರ್ಶಗಳು ನಮಗೆಲ್ಲರಿಗೂ ಮಾರ್ಗದರ್ಶನ. ಇಂದು ಹಾಗೂ ಮುಂದಿನ ಪೀಳಿಕೆಯವರಿಗೆ ಅವರ ಆದರ್ಶಗಳನ್ನು ತಿಳಿಸಿ ಕೊಡುವ ಕೆಲಸ ಇನ್ನಷ್ಟು ಆಗಬೇಕಾಗಿದೆ ಎಂದು ಸುಳ್ಯ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.

ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಸುಳ್ಯ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 130 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಒಂದೇ ಎಂದು ಇಲ್ಲಿ ಜೀವನ ನಡೆಸಲು ಸಂವಿಧಾನದ ಮೂಲಕ ರೂಪುರೇಷೆ ನೀಡಿದವರು ಅಂಬೇಡ್ಕರ್. ಕಷ್ಟದ ಜೀವನ ನಡೆಸಿ ಮೇಲೆ ಬಂದ ಇವರು ಉನ್ನತ ವ್ಯಾಸಂಗ ಮಾಡಿ ಸಂವಿಧಾನ ರಚಿಸಿದರು. ನಾನಿಂದು ತಾಲೂಕಿನ ಅಧ್ಯಕ್ಷ ನಾಗಿದ್ದೇನೆಂದರೆ ಅವರು ರಚಿಸಿದ ಸಂವಿಧಾನವೇ ಕಾರಣ ಎಂದು ಹೇಳಿದರು.

ವಿಟ್ಲ ಅಡ್ಯನಡ್ಕ ಜನತಾ ಪ.ಪೂ.ವಿದ್ಯಾಲಯದ ಉಪನ್ಯಾಸಕ ಸೋಮಶೇಖರ್ ಹಾಸನಡ್ಕ ಉಪನ್ಯಾಸ ನೀಡಿ ಇವತ್ತಿನ ಸಮಾಜದಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಈಗಲೂ ದಲಿತ ಸಮುದಾಯದ ಜನರಿಗೆ ಸರಕಾರದ ಹಕ್ಕುಪತ್ರಗಳು, ಸ್ಮಶಾನಗಳಿಲ್ಲ. ಶೋಷಿತ ವರ್ಗ ಆರ್ಥಿಕವಾಗಿ ಹಿಂದುಳಿದಿದೆ. ನಾಯಕನಾದವರು ಭಾವನೆಗಳಿಗೆ ಒತ್ತು ನೀಡಿ ಅಂಬೇಡ್ಕರ್‌ರ ತತ್ವ, ಆದರ್ಶಗಳನ್ನು ಉಳಿಸುವ ಕೆಲಸ ಆಗಬೇಕು. ಅಂಬೇಡ್ಕರ್ ಕಂಡ ಆಶಯ, ಬಲಿಷ್ಠ ಭಾರತದ ಕನಸು ನನಸಾಗಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಅಧ್ಯಕ್ಷೆ, ಸುಳ್ಯ ತಹಸೀಲ್ದಾರ್ ಕು. ಅನಿತಾಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸುಳ್ಯ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಾ.ಪಂ. ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದ ಜಿ ನಾಯ್ಕಾ, ಬಿ.ಇ.ಒ. ಎಸ್.ಪಿ. ಮಹಾದೇವ ವೇದಿಕೆಯಲ್ಲಿಯಲ್ಲಿದ್ದರು.

ತಾ.ಪಂ. ಇ.ಒ. ಭವಾನಿಶಂಕರ್ ಸ್ವಾಗತಿಸಿದರು. ಶಿಕ್ಷಕ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಸಮಾಜಕಲ್ಯಾಣಾಧಿಕಾರಿ ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದರು.

/**

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News