ಉಬಾರ್ ಡೋನರ್ಸ್‌ ಹೆಲ್ಪ್‌ಲೈನ್‌ನಿಂದ ರಂಝಾನ್ ಕಿಟ್ ವಿತರಣೆ

Update: 2021-04-14 17:31 GMT

ಉಪ್ಪಿನಂಗಡಿ: ಹೊಟ್ಟೆಗೆ, ಬಟ್ಟೆಗೆ, ಅನಾರೋಗ್ಯ ಪೀಡಿತರಾಗಿರುವರಿಗೆ ಅನಾಥರಿಗೆ, ಅಸಹಾಯಕರಿಗೆ ಸಹಾಯ ಮಾಡಿದರೆ, ಅವರ ಸಂಕಷ್ಟದಲ್ಲಿ ಭಾಗಿಯಾದವರಿಗೆ ಅಲ್ಲಾಹನ ಕಡೆಯಿಂದ ಪ್ರೀತಿ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಮತ್ತು ಆ ರೀತಿ ಕೊಡುವವರಿಗೆ ಅಲ್ಲಾಹು ಯಾವತ್ತೂ ಕಡಿಮೆ ಮಾಡಲಾರ ಎಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುದರ್ರಿಸ್ ನಝೀರ್ ಅಝ್ಹರಿ ಬೊಳ್ಮಿನಾರ್ ಹೇಳಿದರು.

ಉಪ್ಪಿನಂಗಡಿಯಲ್ಲಿ ಉಬಾರ್ ಡೋನರ್ಸ್‌ ಹೆಲ್ಪ್‌ಲೈನ್ ವತಿಯಿಂದ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್-19 ಮಹಾಮಾರಿಯಿಂದಾಗಿ ಜನರು ಬಹಳಷ್ಟು ಸಮಸ್ಯೆ, ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ, ಅಂತಹವರನ್ನು ಗುರುತಿಸುವ ಇಲ್ಲಿನ ಯುವಕರ ತಂಡ ಅವರ ಮನೆ ಬಾಗಿಲಿಗೆ ಆಹಾರದ ಕಿಟ್ ನೀಡುತ್ತಿರುವುದು ಯುವಕರಲ್ಲಿ ಇರುವ ಮಾನವೀಯತೆಯನ್ನು ಪ್ರತಿಬಿಂಬಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಬಾರ್ ಡೋನರ್ಸ್‌ ಹೆಲ್ಪ್‌ಲೈನ್ ಸಂಸ್ಥೆಯ ಸಂಚಾಲಕ ಶಬ್ಬೀರ್ ಕೆಂಪಿ,  ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಕಾರ್ಯದರ್ಶಿ ಶುಕ್ರಿಯಾ ಶುಕೂರ್ ಹಾಜಿ, ಖಜಾಂಚಿ ಮುಸ್ತಫಾ, ಸದಸ್ಯರಾದ ಇಸ್ಮಾಯಿಲ್ ತಂಙಳ್, ಸಿದ್ದಿಕ್ ಕೆಂಪಿ, ಉಬಾರ್ ಡೋನರ್ಸ್‌ ಎಡ್ಮಿನ್‌ಗಳಾದ ಇಬ್ರಾಹಿಂ ಆಚಿ ಕೆಂಪಿ, ಯು.ಟಿ. ತೌಸೀಫ್, ಜಮಾಲು ಕೆಂಪಿ, ಶುಕೂರ್ ಮೇದರಬೆಟ್ಟು, ಶಬೀರ್ ನಂದಾವರ, ಮುಸ್ತಾಕ್ ಕುದ್ಲೂರು, ಇಮ್ರಾನ್ ಯು.ಎಫ್.ಸಿ., ರಿಯಾರ್ ಇಂಡಿಯನ್, ಶಮೀರ್ ಕಡವಿನಬಾಗಿಲು, ಸದಸ್ಯರುಗಳಾದ ಹನೀಫ್ ಕೆನರಾ, ಮುಹಮ್ಮದ್ ಕೆಂಪಿ, ಇರ್ಷಾದ್ ಯು.ಟಿ., ಅಶ್ರಫ್ ಡಿಸೈನ್, ಇಮ್ರಾನ್ ಎ.ವೈ.ಎಂ., ಖಾದರ್ ಆದರ್ಶನಗರ, ನೌಶಾದ್ ಎಲೈಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News