×
Ad

ಉತ್ತರಪ್ರದೇಶ: ಕೋವಿಡ್‌ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೀಡಿಯೋ ಮಾಡದಂತೆ ಸ್ಮಶಾನಕ್ಕೆ ಶೀಟಿನ ಗೋಡೆಗಳ ತಡೆ !

Update: 2021-04-15 15:56 IST

ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿನ ಭೈನ್ಸಕುಂಡ್‌ ಸ್ಮಶಾನದಲ್ಲಿ ಕೋವಿಡ್‌ ಪೀಡಿತರಾಗಿ ಮೃತಪಟ್ಟವರ ಅಂತ್ಯಸಂಸ್ಕಾರದ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. ಆದರೆ ಇದೀಗ ಭೈನ್ಸಕುಂಡ್‌ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸುವುದನ್ನು ವೀಡಿಯೋ ಚಿತ್ರೀಕರಣ ಮಾಡದಂತೆ ತಡೆಯಲು ಶೀಟುಗಳ ಗೋಡೆಯನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗುತ್ತಿದೆ.

ಎನ್ಡಿಟಿವಿ ಪತ್ರಕರ್ತ ಅಲೋಕ್‌ ಪಾಂಡೆ ಸೇರಿದಂತೆ ಹಲವಾರು ಮಂದಿ ಈ ವೀಡಿಯೋವನ್ನು ಪ್ರಕಟಿಸಿದ್ದಾರೆ. "ಕೋವಿಡ್‌ ಪೀಡಿತರ ಅಂತ್ಯಸಂಸ್ಕಾರದ ವೀಡಿಯೋ ಹರಿದಾಡಿದ್ದ ಈ ಸ್ಮಶಾನದಲ್ಲಿ ಈಗ ಗೋಡೆಗಳನ್ನು ನಿರ್ಮಿಸುತ್ತಿರುವುದೇಕೆ? ದಯವಿಟ್ಟು ಉತ್ತರಿಸಿ". ಇದು ಯಾವ ದೃಷ್ಟಿಕೋನವನ್ನು ಸೂಚಿಸುತ್ತದೆ? ಎಂದು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಸ್ಮಶಾನದಿಂದ ಕೋವಿಡ್‌ ಪೀಡಿತರ ಅಂತ್ಯಸಂಸ್ಕಾರದ ಸಂದರ್ಭ ಹೊರಬರುವ ಹೊಗೆಯು ರಸ್ತೆಯ ಇನ್ನೊಂದು ಬದಿಗೆ ದಾಟದಿರಲಿ ಎಂದು ಉತ್ತರಪ್ರದೇಶ ಸರಕಾರ ಮಾಡಿರುವ ಮಾಸ್ಟರ್‌ ಸ್ಟ್ರೋಕ್‌ ಇದಾಗಿದೆ. ನಮ್ಮ ಮಹಾರಾಜ್‌ ಯೋಗೀಜಿಯವರು ಓರ್ವ ದೂರದೃಷ್ಟಿಯ ನಾಯಕ" ಎಂದು ವ್ಯಕ್ತಿಯೋರ್ವರು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News