ಮಂಗಳೂರು: ಐಟಿ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್; ದಾಖಲೆ ಪತ್ರಗಳು ಬೆಂಕಿಗಾಹುತಿ

Update: 2021-04-15 11:25 GMT

ಮಂಗಳೂರು, ಎ.15: ನಗರದ ಅತ್ತಾವರದಲ್ಲಿರುವ ಐಟಿ (ಆದಾಯ ತೆರಿಗೆ ಇಲಾಖೆ) ಕಚೇರಿಯಲ್ಲಿ ಗುರುವಾರ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದ ಐಟಿ ಕಚೇರಿಯ ಅಮೂಲ್ಯ ದಾಖಲೆಪತ್ರಗಳ ಸಹಿತ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ.

ಐಟಿ ಕಟ್ಟಡದ ಮೂರನೆ ಮಹಡಿಯಲ್ಲಿರುವ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿತು. ಮಾಹಿತಿ ತಿಳಿದ ತಕ್ಷಣ ಪಾಂಡೇಶ್ವರದ ಅಗ್ನಿಶಾಮದ ದಳದ ಸಿಬ್ಬಂದಿ ವರ್ಗವು ಸುಮಾರು ಒಂದುವರೆ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. ಆದರೆ ಅಷ್ಟರಲ್ಲೇ ಐಟಿ ಕಚೇರಿಯ ದಾಖಲೆಪತ್ರಗಳು ಸುಟ್ಟು ಭಸ್ಮವಾಗಿದೆ. ಮೇಜು, ಕುರ್ಚಿ,ಫ್ಯಾನುಗಳಿಗೆ ಹಾನಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News