ಸುಮಯ್ಯ ನಾಝ್‍ರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪ್ರದಾನ
Update: 2021-04-15 17:08 IST
ಭಟ್ಕಳ: ಸುಮಯ್ಯಾ ನಾಝ್ ಇವರಿಗೆ ಮಂಗಳೂರು ವಿಶ್ವವಿದ್ಯಾಲಯ (ಮಂಗಳ ಗಂಗೋತ್ರಿ) ಪಿ.ಎಚ್‍ಡಿ. ಪ್ರಧಾನ ಮಾಡಿದೆ. ಇವರು ಮಂಡಿಸಿದ ಡಿಸ್ಕ್ರಿಮಿನೇಶನ್ ಸೊಶಿಯಲ್ ಎಕ್ಸಕ್ಲೂಶನ್ ಎಂಡ್ ಪವರ್ಟಿ ಆಫ್ ಶೆಡ್ಲೂಲ್‍ಕಾಸ್ಟ್ ಇನ್ ಕರ್ನಾಟಕ, ಎ ಕೇಸ್ ಸ್ಟಡಿ ಫ್ರಾಮ್ ಮೈಸೂರು ಡಿಸ್ಟ್ರಿಕ್ಟ್ ಪ್ರಬಂಧಕ್ಕೆ ಪಿ.ಎಚ್‍ಡಿ. ಪ್ರದಾನ ಮಾಡಲಾಗಿದ್ದು, ಮಂಗಳ ಗಂಗೋತ್ರಿಯಲ್ಲಿ ಎಪ್ರಿಲ್ 10ರಂದು ನಡೆದ 39ನೇ ಪದವಿ ಪ್ರಧಾನ ಸಮಾರಂಭದಲ್ಲಿ ಪಿ.ಎಚ್‍ಡಿ. ಪ್ರದಾನ ಮಾಡಲಾಯಿತು.
ಸುಮಯ್ಯಾ ನಾಜ್ ಇವರು ಮಂಗಳೂರು ವಿಶ್ವವಿದ್ಯಾಲಯದ ಇಕಾನಾಮಿಕ್ಸ್ ಡಿಪಾರ್ಟಮೆಂಟ್‍ನ ಮುಖ್ಯಸ್ಥರಾದ ಪ್ರೊ. ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಪ್ರಸ್ತುತ ಇವರು ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ಇಕಾನಾಮಿಕ್ಸ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಇಲ್ಲಿನ ಅರ್ಬನ್ ಬ್ಯಾಂಕ್ ಉದ್ಯೋಗಿ ಜಾಕಿರ್ ಕಾಶಿಮಜಿ ಅವರ ಪತ್ನಿ.