ಹೂಡೆ: ಬಡ ಕುಟುಂಬಕ್ಕೆ ಮನೆ ಹಸ್ತಾಂತರ

Update: 2021-04-15 14:32 GMT

ಉಡುಪಿ, ಎ.15: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಅರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಕ್ಕೆ ಇಂದು ಹೊಸ ಮನೆ ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ನ ರಾಜ್ಯ ಕಾರ್ಯಕರ್ತ ರವೂಫ್ ಕಿದೆವರ್ ಫಲಾನುಭವಿ ಇಲ್ಯಾಸ್ ಅವರಿಗೆ ಕೀಲಿಗೈ ಹಸ್ತಾಂತರಿಸಿದರು. ತೋನ್ಸೆ ಗ್ರಾಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ನಿತ್ಯಾನಂದ ಕೆಮ್ಮಣ್ಣು, ಹೈದರ್ ಅಲಿ, ಫೌಝೀಯಾ ಸಾದಿಕ್ ಶುಭ ಹಾರೈಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಅಧ್ಯಕ್ಷತೆ ವಹಿಸಿದ್ದರು. ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಜಯ, ಮಮ್ತಾಝ್, ಉಸ್ತಾದ್ ಹೈದರ್, ಉಸ್ತಾದ್ ಸಾದೀಕ್, ಎಸ್‌ಐಓನ ಹೂಡೆ ಘಟಕಾಧ್ಯಕ್ಷ ವಸೀಮ್, ಎಚ್.ಆರ್.ಎಸ್‌ನ ಹಸನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News