ಉಡುಪಿ: ರಾಷ್ಟ್ರಮಟ್ಟದ ಸಾಂಪ್ರದಾಯಿಕ ಕಲೆಗಳ ಕಾರ್ಯಾಗಾರ ಉದ್ಘಾಟನೆ

Update: 2021-04-15 14:40 GMT

ಉಡುಪಿ, ಎ.15: ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ 15 ದಿನಗಳ ಕಾಲ ನಡೆಯುವ ‘ಶ್ರೀರಾಮ ಹನುಮದುತ್ಸವ’ದಲ್ಲಿ ವಿಶ್ವ ಕಲಾವಿದರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರಮಟ್ಟದ ಸಾಂಪ್ರದಾಯಿಕ ಕಲೆಗಳ ಕಾರ್ಯಾಗಾರದ ಉದ್ಘಾಟನೆ ಇಂದು ಸಂಜೆ ನೆರವೇರಿತು.

ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಬಿಳಿ ಹಾಳೆಯ ಮೇಲೆ ಸ್ವತಹ ಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಾಗಾರದಲ್ಲಿ 5 ರಾಜ್ಯಗಳ ಒಂಭತ್ತು ಮಂದಿ ರಾಷ್ಟ್ರಮಟ್ಟದ ಕಲಾವಿದರು ಭಾಗವಹಿಸಿದ್ದರು. ವಿವಿಧ ಕಲೆಗಳ ಕಲಾಪ್ರದರ್ಶನವನ್ನೂ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.

ಶ್ರೀಗಳು ಸಾಂಪ್ರದಾಯಿಕ ಚಿತ್ರಕಲಾ ಪ್ರದರ್ಶನ, ಮಧುಬನಿ ಆರ್ಟ್ಸ್ ಮತ್ತು ತೊಗಲು ಗೊಂಬೆಗಳ ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಉಡುಪಿ ವಲಯದ ಡಿಜಿಎಂ ಲೀನಾ ಪಿಂಟೋ, ಎಜಿಎಂ ವೈ ಹರೀಶ್, ರಥಬೀದಿ ಶಾಖೆಯ ಪ್ರಭಂದಕರಾದ ದಿನೇಶ್ ಹೆಗ್ಡೆ, ಕಲಾ ಪ್ರದರ್ಶನದ ಸಂಘಟಕರಾದ ಪುರುಷೋತ್ತಮ ಅಡ್ವೆ, ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News