×
Ad

ಕೋವಿಡ್ ಹಾವಳಿ: ನೀಟ್ ಪಿಜಿ ಪರೀಕ್ಷೆ ಮುಂದೂಡಿದ ಕೇಂದ್ರ ಸರಕಾರ

Update: 2021-04-15 20:32 IST

ಹೊಸದಿಲ್ಲಿ,ಎ.15: ಕೋವಿಡ್-19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎ.18ರಂದು ನಿಗದಿಯಾಗಿದ್ದ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್ ಪಿಜಿ 2021)ಯನ್ನು ಸದ್ಯಕ್ಕೆ ಮಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬುಧವಾರ ತಿಳಿಸಿದ್ದಾರೆ.
ಯುವ ವೈದ್ಯಕೀಯ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಟ್ವೀಟಿಸಿರುವ ಸಚಿವರು,ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು ಎಂದಿದ್ದಾರೆ.

ನೀಟ್ ಪಿಜಿ ಪರೀಕ್ಷೆಯನ್ನು ಎಂಎಸ್ ಮತ್ತು ಎಂಡಿ ಕೋರ್ಸ್ ಗಳಿಗೆ ಪ್ರವೇಶ ಬಯಸುವ ವೈದ್ಯರಿಗಾಗಿ ನಡೆಸಲಾಗುತ್ತದೆ. ಈ ಹಿಂದೆ ಜನವರಿಯಲ್ಲಿ ಪರೀಕ್ಷೆಯು ನಿಗದಿಯಾಗಿತ್ತಾದರೂ ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಎ.18ಕ್ಕೆ ಮುಂದೂಡಲಾಗಿತ್ತು.

ಗುರುವಾರ ಕೇಂದ್ರವು ತನ್ನ ನಿರ್ಧಾರವನ್ನು ಪ್ರಕಟಿಸುವ ಮುನ್ನ ವೈದ್ಯರ ಗುಂಪೊಂದು ನೀಟ್ ಪರೀಕ್ಷೆಯ ಮುಂದೂಡಿಕೆಯನ್ನು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು. ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ನೀಟ್ ಪಿಜಿ 2021ರ ಮುಂದೂಡಿಕೆಗೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News