ದ.ಕ.ಜಿಲ್ಲೆಯಲ್ಲಿ ಗುರುವಾರ 166 ಮಂದಿಗೆ ಕೊರೋನ ಪಾಸಿಟಿವ್

Update: 2021-04-15 15:25 GMT

ಮಂಗಳೂರು, ಎ.15: ದ.ಕ.ಜಿಲ್ಲೆಯಲ್ಲಿ ಗುರುವಾರ 166 ಮಂದಿಯಲ್ಲಿ ಕೊರೋನ ಪಾಸಿಟಿವ್ ಧೃಢಪಡುವುದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 37,306 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ.

ಗುರುವಾರ 68 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ 35,313 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 743 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 6,74,826 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 6,37,520 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಲ್ಲದೆ 1250 ಸಕ್ರಿಯ ಪ್ರಕರಣವಿದೆ.

ದಂಡ: ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದುದಕ್ಕೆ ಸಂಬಂಧಿಸಿ ಈವರೆಗೆ 45,706 ಪ್ರಕರಣ ದಾಖಲಿಸಿ, 47,45,399 ರೂ. ದಂಡ ವಸೂಲಿ ಮಾಡಲಾಗಿದೆ.

11,499 ಮಂದಿಗೆ ಕೊರೋನ ಲಸಿಕೆ
ಆರೋಗ್ಯ ಇಲಾಖೆ ವತಿಯಿಂದ ದ.ಕ. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟದಲ್ಲಿ ಗುರುವಾರ ವಿಶೇಷ ಲಸಿಕಾ ಅಭಿಯಾನ ಆಯೋಜಿಸಲಾಗಿತ್ತು. ಅದರಂತೆ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ 11,499 ಮಂದಿಗೆ ಕೊರೋನ ರೋಗ ನಿರೋಧಕ ಲಸಿಕೆ ವಿತರಿಸಿವೆ.

ದ.ಕ. ಜಿಲ್ಲೆಯಲ್ಲಿ ಗುರುವಾರ 60 ವರ್ಷ ಮೇಲ್ಪಟ್ಟ 3,979 ಮಂದಿಗೆ ಮೊದಲ ಡೋಸ್, 542 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 39 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 170 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 29 ಮಂದಿ ಫ್ರಂಟ್‌ಲೈನ್ ವರ್ಕರ್ಸ್‌ ಮೊದಲ ಡೋಸ್, 47 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45ರಿಂದ 59 ವರ್ಷದೊಳಗಿನ 6,486 ಮಂದಿ ಮೊದಲ ಡೋಸ್, 207 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಶುಕ್ರವಾರ 30 ಸಾವಿರ ಡೋಸ್ ಲಸಿಕೆ: ದ.ಕ.ಜಿಲ್ಲೆಗೆ ಶುಕ್ರವಾರ ಸುಮಾರು 30 ಸಾವಿರ ಡೋಸ್ ಲಸಿಕೆ ರವಾನೆಯಾಗಲಿದೆ. 23 ಸಾವಿರ ಕೋವಿಶೀಲ್ಡ್ ಮತ್ತು 7 ಸಾವಿರ ಕೋವ್ಯಾಕ್ಸಿನ್ ಲಸಿಕೆ ಬರಲಿದೆ. ಸುಮಾರು 12 ಸಾವಿರ ಲಸಿಕೆ ಸದ್ಯ ಸಂಗ್ರಹ ಇದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News