×
Ad

ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ನಿಧನ

Update: 2021-04-16 10:40 IST

ಹೊಸದಿಲ್ಲಿ: ಮಾಜಿ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಶುಕ್ರವಾರ ಬೆಳಗ್ಗಿನ ಜಾವ ನಿಧನರಾದರು. ಅವರಿಗೆ ಗುರುವಾರ ರಾತ್ರಿ  ಕೊರೋನ ಸೋಂಕು ತಗಲಿರುವುದು ದೃಡಪಟ್ಟಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

68ರ ವಯಸ್ಸಿನ ಸಿನ್ಹಾ ಬಿಹಾರ ಕೇಡರ್ ನ 1974ರ ಬ್ಯಾಚಿನ ಐಪಿಎಸ್(ಭಾರತೀಯ ಪೊಲೀಸ್ ಸೇವೆ)ಅಧಿಕಾರಿಯಾಗಿದ್ದರು.

ಸಿನ್ಹಾ 2012ರಲ್ಲಿ ಸಿಬಿಐ ಮುಖ್ಯಸ್ಥರಾಗಿ ನೇಮಕವಾಗುವ ಮೊದಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ(ಐಟಿಬಿಪಿ), ರೈಲ್ವೆ ಸಂರಕ್ಷಣಾ ಪಡೆಗಳ ಮಹಾನಿರ್ದೇಶಕರಾಗಿದ್ದರು.  ದಿಲ್ಲಿ ಹಾಗೂ ಪಾಟ್ನಾದ ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News