ಬಂಗಾಳದಲ್ಲಿ ಕೋವಿಡ್ ಉಲ್ಬಣಕ್ಕೆ ಬಿಜೆಪಿ ಹೊಣೆ: ಮಮತಾ ಆರೋಪ

Update: 2021-04-16 14:58 GMT

ಹೊಸದಿಲ್ಲಿ: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುವುದನ್ನು ತಡೆಯಲು  ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೊರಗಿನವರನ್ನು ಕರೆತರುವುದನ್ನು ತಡೆಯುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ರ್ಯಾಲಿಗಳಿಗೆ ಪೆಂಡಾಲ್ ಗಳನ್ನು ನಿರ್ಮಿಸಲು  ಗುಜರಾತ್ ನಂತಹ ಹೆಚ್ಚು'ಕೊರೋನ ಪೀಡಿತ' ರಾಜ್ಯಗಳಿಂದ ಜನರನ್ನು ಬಿಜೆಪಿ ಕರೆ ತಂದಿದೆ ಎಂದು ನಬಾದ್ವಿಪ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ ಹೇಳಿದರು.

ಗುಜರಾತ್‌ನಂತಹ ರಾಜ್ಯಗಳಿಂದ ಬರುವ ಜನರನ್ನು ತಡೆಗಟ್ಟಿ ಎಂದು ಚುನಾವಣಾ ಆಯೋಗಕ್ಕೆ ವಿನಂತಿಸುವೆ. ಬಂಗಾಳದಲ್ಲಿ ಕೋವಿಡ್ -19 ಹರಡುವಿಕೆಗೆ ಬಿಜೆಪಿ ಕಾರಣವಾಗಿದೆ. ಪ್ರಧಾನಿ ಹಾಗೂ ಇತರ ನಾಯಕರು ಪ್ರಚಾರಕ್ಕೆ ಬಂದರೆ ನಾವೇನು ಹೇಳುವುದಿಲ್ಲ. ಆದರೆ ರ್ಯಾಲಿಗಳಲ್ಲಿ ವೇದಿಕೆಗಳು ಹಾಗೂ ಪೆಂಡಾಲ್ ಗಳನ್ನು ನಿರ್ಮಿಸಲು ಕೊರೋನದಿಂದ ಹೆಚ್ಚು ಪೀಡಿತವಾಗಿರುವ ರಾಜ್ಯಗಳಿಂದ ಜನರನ್ನು ಏಕೆ ಕರೆ ತರಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News