ಕೊರೋನ ಸೋಂಕು ದೃಢಪಟ್ಟಿದ್ದ 14 ದಿನದ ಮಗು ಮೃತ್ಯು

Update: 2021-04-16 16:16 GMT
ಸಾಂದರ್ಭಿಕ ಚಿತ್ರ

ಜೈಪುರ, ಎ.16: ಕೊರೋನ ಸೋಂಕು ದೃಢಪಟ್ಟಿದ್ದ 14 ದಿನದ ನವಜಾತ ಶಿಶು ಮೃತಪಟ್ಟಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ವರದಿಯಾಗಿದೆ. ಎಪ್ರಿಲ್ 1ರಂದು ಜನಿಸಿದ್ದ ಮಗುವಿನ ತಾಯಿಗೆ ಕೊರೋನ ಸೋಂಕು ಇದ್ದು ಹುಟ್ಟಿದಾಗಲೇ ಮಗುವಿಗೂ ಸೋಂಕು ದೃಢಪಟ್ಟಿತ್ತು. ಬಳಿಕ ತಾಯಿಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ಶಿಶುವನ್ನು ತೀವ್ರ ನಿಗಾ ಘಟಕದಡಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮಗುವಿನ ಆರೋಗ್ಯ ತೀವ್ರ ಹದಗೆಟ್ಟಾಗ ರೆಮ್ಡೆಸಿವರ್ ಲಸಿಕೆ ನೀಡಲಾಗಿದೆ ಎಂದು ಸೂರತ್ ನ ಡೈಮಂಡ್ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

ಮಗು ವೆಂಟಿಲೇಟರ್ ವ್ಯವಸ್ಥೆಯಲ್ಲಿತ್ತು. ಮಗುವಿನ ಚಿಕಿತ್ಸೆಗಾಗಿ ಸೂರತ್ನ ಮಾಜಿ ಮೇಯರ್ ಜಗದೀಶ್ ಪಟೇಲ್ (ಇತ್ತೀಚೆಗಷ್ಟೇ ಕೊರೋನದಿಂದ ಚೇತರಿಸಿಕೊಂಡಿದ್ದರು) ತಮ್ಮ ಪ್ಲಾಸ್ಮಾ ದಾನ ನೀಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶಿಶು ಕೊನೆಯುಸಿರೆಳೆದಿದೆ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ. ಸೂರತ್ ನಗರದಲ್ಲಿ ಗುರುವಾರ ಕೊರೋನ ಸೋಂಕಿನ ಹೊಸ 1,551 ಪ್ರಕರಣ ದಾಖಲಾಗಿದ್ದು 26 ಮರಣ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News