ಅವ್ಯವಸ್ಥೆ ಸರಿಪಡಿಸುವಲ್ಲಿ ಮನಪಾ ಕ್ರಿಯಾಶೀಲವಾಗಲಿ: ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ
Update: 2021-04-16 23:45 IST
ಮಂಗಳೂರು,ಎ.16: ಮಂಗಳೂರು ನಗರದಲ್ಲಿ ನಡೆಯುವ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾರ್ಯ ನಿರ್ವಹಿಸಿದ ನಂತರ ಕಲ್ಲು,ಮಣ್ಣು, ಅಳಿದುಳಿದ ಸಿಮೆಂಟ್ ಮತ್ತು ಅವುಗಳ ಖಾಲಿ ಚೀಲಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗುವ ಪೃವೃತ್ತಿ ಸರ್ವೇ ಸಾಮಾನ್ಯವಾಗಿದೆ. ಇದರ ಬಗ್ಗೆ ಮ.ನ.ಪಾ. ಮೌನವಾಗಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ಹೇಳಿದ್ದಾರೆ.
ಕಟ್ಟಡ ದುರಸ್ತಿ ಮಾಡಿ ಉಳಿದ ಸಾಮಾನು ರಸ್ತೆ ಬದಿಯಲ್ಲಿಯೇ ಎಸೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿರುವ ಉದಾಹರಣೆಗಳು ಹಲವು ಇದೆ. ಪಾಲಿಕೆಯ ಆಡಳಿತ ವರ್ಗ ಮತ್ತು ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.